Latest

ಮುರುಘಾಮಠದ ಪವರ್ ಆಫ್ ಅಟಾರ್ನಿ ಹಸ್ತಾಂತರ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರಿಘಾಶ್ರೀಗಳ ಪೀಠತ್ಯಾಗಕ್ಕೆ ಒತ್ತಡ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸ್ವಾಮೀಜಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ವಿವಿಧ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಮುರುಘಾ ಮಠದ ಪವರ್ ಆಫ್ ಅಟಾರ್ನಿಯನ್ನು ನಿವೃತ್ತ ನ್ಯಾ.ಎಸ್.ಬಿ.ವಸ್ತ್ರದಮಠ್ ಅವರಿಗೆ ಮುರುಘಾ ಶ್ರೀಗಳು ನೀಡಿದ್ದಾರೆ.

ಮುರುಘಾ ಮಠದ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿಯೂ ಆಗಿರುವ ವಸ್ತ್ರದಮಠ್ ಅವರುಗೆ ಪವರ್ ಆಫ್ ಅಟಾರ್ನಿಯನ್ನು ಅಧಿಕೃತವಾಗಿ ನೋಟರಿ ಮಾಡಿಸಿ ನೀಡಲಾಗಿದೆ. ಎಸ್ ಜೆ ಎಂ ವಿದ್ಯಾಪೀಠದ ಚೆಕ್ ಸಹಿ ಸೇರಿದಂತೆ ಹಲವು ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಪವರ್ ಆಫ್ ಅಟಾರ್ನಿ ಹಸ್ತಾಂತರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಅಧಿಕಾರ ಕಾರ್ಯದರ್ಶಿ ವಸ್ತ್ರದಮಠ ಅವರುಗೆ ಸಿಗಲಿದೆ.

ಕರ್ನಾಟಕದ ಜನತೆಗೆ ಧನ್ಯವಾದ ಅರ್ಪಿಸಿದ ರಾಹುಲ್ ಗಾಂಧಿ

Home add -Advt

https://pragati.taskdun.com/politics/bharath-jodo-yatrebellaryrahul-gandhi/

Related Articles

Back to top button