Belagavi NewsBelgaum NewsElection NewsKannada NewsKarnataka NewsPolitics

ಬೆಳಗಾವಿ : ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ಹಣ ಸೀಜ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2024ರ ಚುನಾವಣೆಗೆ ಫುಲ್ ತಯಾರಿ ಮಾಡಿಕೊಂಡಿರುವ ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ. ಚುನಾವಣಾಧಿಕಾರಿಗಳು ಶುಕ್ರವಾರ ಬೆಳ್ಳಂ ಬೆಳಗ್ಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಸೀಜ್ ಮಾಡಿದ್ದಾರೆ.

ಖಾನಾಪುರ ತಾಲೂಕಿನ ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೆ ಅನಧಿಕೃತವವಾಗಿ ಸಾಗಿಸುತ್ತಿದ್ದ 7.98 ಲಕ್ಷ ಹಣ ಜಪ್ತಿ ಮಾಡಲಾಗಿದೆ ಎಂದು ಖಾನಾಪುರ ವಿಧಾನಸಭಾ ಕ್ಷೇತ್ರದ ಸಾಹಾಯಕ ಚುನಾವಣಾಧಿಕಾರಿ ಮಾಹಿತಿ ನಿಡಿದ್ದಾರೆ.‌

ಶುಕ್ರವಾರ ಬೆಳಗ್ಗೆ ಕಣಕುಂಬಿ ಚೆಕ್ ಪೋಸ್ಟ್ ಮೂಲಕ ಸಾರಿಗೆ ಬಸ್ಸ್ ನಲ್ಲಿ ಬೈಲಹೊಂಗಲ ಪಟ್ಟಣದ ಸಂಜಯ ಬಸವರಾಜ ರೆಡ್ಡಿ ಎಂಬ ವ್ಯಕ್ತಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7.98 ಲಕ್ಷ ಹಣ ಜಪ್ತಿ ಮಾಡಲಾಗಿದೆ.

ಹಣ ಜಪ್ತಿ ಮಾಡಿಕೊಂಡಿರುವ ಚುನಾವಣಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Home add -Advt

Related Articles

Back to top button