Kannada NewsLatest

ಬೆಳಗಾವಿಗೆ 12ರಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರು: ಪ್ರತಿಭಾ ಪುರಸ್ಕಾರ, ವಿಪ್ರ ಸಾಧಕರಿಗೆ ಸನ್ಮಾನ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಫೆ.12ರಂದು ಬೆಳಗಾವಿಯಲ್ಲಿ ನಡೆಯಲಿದೆ.

ಅಂದು ಸಂಜೆ 4 ಗಂಟೆಗೆ ಭಾಗ್ಯನಗರದ 2ನೇ ಕ್ರಾಸ್ ನ ಸಿಟಿ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

Home add -Advt

ಧಾರವಾಡ, ಚಿಕ್ಕೋಡಿ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ  ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿಪ್ರ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬ್ರಾಹ್ಮಣ ಸಮಾಜದ ಸಾಧಕರನ್ನು ಸನ್ಮಾನ ಮಾಡಲಾಗುವುದು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದೆ ಮಂಗಲ ಅಂಗಡಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಭಾಗವಹಿಸುವರು.  ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್.ಎಂ.ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರುಗಳಾದ ವಸಂತ ನಾಡಜೋಶಿ, ವತ್ಸಲಾ ನಾಗೇಶ, ಜಗದೀಶ ಹುನಗುಂದ, ಜಗನ್ನಾಥ ಕುಲಕರ್ಣಿ, ವಿ.ಪವನಕುಮಾರ ಮೊದಲಾದವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಬೆಳಗಾವಿ ಜಿಲ್ಲಾ ಸಂಚಾಲಕಿ ಪ್ರಿಯಾ ಪುರಾಣಿಕ ತಿಳಿಸಿದ್ದಾರೆ.

Invitation Bramhana – final

 

*DFO ವೆಂಕಟೇಶ್ ಗೆ ಲೋಕಾಯುಕ್ತ ಶಾಕ್*

https://pragati.taskdun.com/dfokolaralokayukta-raid/

ಬಿಬಿಎಂಪಿ ಆಡಳಿತ ಸುಧಾರಣೆ ಕುರಿತ ವರದಿ ಸಲ್ಲಿಕೆ

https://pragati.taskdun.com/submission-of-report-on-administrative-reforms-of-bbmp/

*ಕೆಂಗಲ್ ಹನುಮಂತಯ್ಯ ಅವರ ಕುರಿತ ಗ್ರಂಥ ಇದೇ ವರ್ಷ ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/kengal-hanumanthaiah115th-birth-anniversarycm-basavaraj-bommai/

Related Articles

Back to top button