Kannada News

ಬೆಳಗಾವಿಗೆ ಮತ್ತೆರಡು ನಿಗಮ – ಮಂಡಳಿ ಹುದ್ದೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಶಾಸಕ ವಿಶ್ವನಾಥ ಪಾಟೀಲ ಅವರನ್ನು ಕರ್ನಾಟಕ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ನಿನ್ನೆಯಷ್ಟೆ 33 ನಿಗಮ ಮಂಡಳಿಗಳಿಗೆ ನೇಮಕವಾದ ಬೆನ್ನಲ್ಲೇ ಇಂದು ಮತ್ತೆ 2 ಹೊಸ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿಶ್ವನಾಥ ಪಾಟೀಲ ಬಿಜೆಪಿಯ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ವಿಶ್ವನಾಥ ಪಾಟೀಲ ಜೊತೆಗೆ ಬಾಗಲಕೋಟೆಯ ಯಲ್ಲಪ್ಪ ಮಲ್ಲಪ್ಪ ಬೆಂಡಿಗೇರಿ ಅವರನ್ನು ಕರ್ನಾಟಕ ರಾಜ್ಯ ಸಹಕಾರ ಕುಕ್ಕುಟ ಮಹಾಮಂಡಳದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಯಬಾಗ ಶಾಸಕ ದುರ್ಯೋಧನ ಐಹೊಳೆಯವರಿಗೆ ಈ ಹಿಂದೆ ನೀಡಲಾಗಿದ್ದ ಖಾದಿ ಮಂಡಳಿಯ ಅಧ್ಯಕ್ಷಸ್ಥಾನವನ್ನು ಹಿಂಪಡೆದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Home add -Advt

 

Related Articles

Back to top button