Kannada NewsKarnataka News

ಖಾನಾಪುರ ಅರಣ್ಯದಲ್ಲಿ ದುರಂತ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಸ್ಫೋಟಕ ಸಿಡಿದು ಪ್ರಾಣಿಗಳ ಬೇಟೆಗಾಗಿ ತೆರಳುತ್ತಿದ್ದ ಯುವಕ ತಾನೇ ಸಾವಿಗೀಡಾಗಿದ್ದಾನೆ.

ಖಾನಾಪುರ ತಾಲೂಕಿನ ನಂದಗಡ ಬಳಿಯ ಮಾಚಿಗಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಳೆ ಹೊನ್ನೂರು ತಾಲೂಕಿನ ಹಕ್ಕಿಪಕ್ಕಿ ಗ್ರಾಮದ 17 ವರ್ಷದ ಗಜೇಂದ್ರ ರಜಪೂತ ಮೃತ ಯುವಕ.  ಪ್ರಾಣಿಗಳ ಬೇಟೆಗೆ ಗಜೇಂದ್ರ ಹಾಗೂ ಇನ್ನೋರ್ವ ಯುವಕ  ಸ್ಫೋಟಕ ವಸ್ತುಗಳನ್ನು ತಂದಿದ್ದರು.

Home add -Advt

ಬೇಟೆಗೆ ಹೋಗುತ್ತಿದ್ದಾಗ ಬೈಕಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಈ ಅಪಘಾತದಿಂದ ಬ್ಯಾಗ್​​ನಲ್ಲಿದ್ದ ವಸ್ತುಗಳು ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಗಜೇಂದ್ರ ‌ಮೃತಪಟ್ಟಿದ್ದಾನೆ. ಶಿವಕುಮಾರ್ ಎನ್ನುವ ಇನ್ನೋರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಫೋಟಕ್ಕೆ ಮೃತನ ದೇಹ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ನಂದಗಡ ಹಾಗೂ ಖಾನಾಪುರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

Related Articles

Back to top button