Kannada NewsLatest

ಐದು ದಿನಗಳ ಪ್ಯಾಕಲ್ಟಿ ಡೆವಲಫ್‌ ಮೆಂಟ್ ಪ್ರೋಗ್ರಾಂ

ಐದು ದಿನಗಳ ಪ್ಯಾಕಲ್ಟಿ ಡೆವಲಫ್‌ ಮೆಂಟ್ ಪ್ರೋಗ್ರಾಂ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯಲ್ಲಿ, “ಪ್ಯಾರಡಿಮ್ಸ್ ಇನ್ ಇಂಟೆಲಿಜೆಂಟ್ ಕಂಪ್ಯೂಟಿಂಗ್” ವಿಷಯದಲ್ಲಿ ಐದು ದಿನಗಳ ಪ್ಯಾಕಲ್ಟಿ ಡೆವಲಫ್‌ ಮೆಂಟ್ ಪ್ರೋಗ್ರಾಮ್ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ದಿನಾ0ಕ 29-07-2019 ರ0ದು “ಜ್ಞಾನ ಸಂಗಮ”, ಬೆಳಗಾವಿಯಲ್ಲಿ ಏರ್ಪಡಿಸಲಾಗಿತ್ತು. ಡಾ. ಕವಿ ಮಹೇಶ, ಇಂಡಿಯನ್ ಇನ್ಸ್ಟ್ಯೂಟ್ ಆಫ್ ಇನ್‌ರ್ಮಾಮೇಷನ್ ಟೆಕ್ನಾಲಜಿ, ಧಾರವಾಡ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಡಾ. ಕವಿ ಮಹೇಶ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಇಂಟೆಲಿಜೆಂಟ್ ಕಂಪ್ಯೂಟಿಂಗ್ ತಂತ್ರಜ್ಞಾನ ಇತ್ತೀಚಿಗೆ ಸಾಮಾನ್ಯ ಜೀವನದ ಭಾಗವಾಗಿದೆ ಎಂದು ಹೇಳಿದರು. ಸದರಿ ತಂತ್ರಜ್ಞಾನದ ಸಾಧಕ, ಬಾಧಕಗಳ ಬಗ್ಗೆಯೂ ಅವರು ವಿವರಿಸಿದರು.

ವಿತಾವಿ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಸಮಾರ0ಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂಟೆಲಿಜೆಂಟ್ ಕಂಪ್ಯೂಟಿಂಗ್ ತಂತ್ರಜ್ಞಾನ ಭವಿಷ್ಯದಲ್ಲಿ ಸಮಾಜ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ಈ ವಿಷಯ ಸರ್ಕಾರ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳ ಗಮನದಲ್ಲಿಯೂ ಇದೆ ಎಂದು ಹೇಳಿದರು.

ವಿತಾವಿ ಪರೀಕ್ಷಾ ವಿಭಾಗದ ಕುಲಸಚಿವರಾದ ಡಾ. ಸತೀಶ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿಯ ವಿತಾವಿ ಪ್ರಾದೇಶಿಕ ನಿರ್ದೇಶಕರಾದ ಡಾ. ಆನಂದ ಶಿವಾಪ್ಪರ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ. ಎಸ್. ಎ. ಅಂಗಡಿ ತರಬೇತಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಡಾ. ರಶ್ಮಿ ರಚ್ಚ ಹಾಗೂ ಶ್ರೀ ವಿವೇಕಾನಂದ ರೆಡ್ಡಿ ಉಪಸ್ಥಿತರಿದ್ದರು. 50 ಜನ ಪ್ರಾಧ್ಯಾಪಕರು ತರಬೇತಿ ಕಾರ್ಯಕ್ರದಲ್ಲಿ ಭಾಗವಹಿಸಿದ್ದಾರೆ. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button