Kannada NewsUncategorized

*24ನೇ ವಿಟಿಯು ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು “ರಜತ ಮಹೋತ್ಸವ” ಅಂಗವಾಗಿ ೨೦೨೩ ಮೇ ದಿನಾಂಕ ೨೧ನೇ ರಿಂದ ೨೪ನೇ ರವರಿಗೆ ರಂದು ‘೨೪ ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟ’ ವನ್ನು ವಿ.ತಾ.ವಿ. ಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದರ ಉದ್ಘಾಟನಾ ಸಮಾರಂಭವು ರವಿವಾರ, ದಿನಾಂಕ ೨೧.೦೫.೨೦೨೩ ರಂದು ಬೆಳಗ್ಗೆ ೯.೦೦ ಗಂಟೆಗೆ ವಿ.ತಾ.ವಿ.ಯ ಮೈದಾನದಲ್ಲಿ ಜರುಗಿತು. ಮಾನ್ಯ ಕುಲಪತಿಗಳಾದ ಪ್ರೊ ವಿದ್ಯಾಶಂಕರ್ ಎಸ್. ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಒಲಿಂಪಿಕ್ ಕ್ರೀಡೆಯಲ್ಲಿ ಭಾಗವಹಿಸಿದ ಹಾಗೂ ಹೈಜಂಪ್ (ಎತ್ತರದ ಜಿಗಿತ) ರಾಷ್ಟ್ರ ಮಟ್ಟದ ದಾಖಲೆಯನ್ನು ಹೊಂದಿರುವ ಶ್ರೀಮತಿ ಸಹನಾ ಕುಮಾರಿ ಹಾಗೂ ಇವರ ಪತಿಯಾದ ಅಂತಾರಾಷ್ಟ್ರೀಯ ಕ್ರೀಡಾಪಟು ಶ್ರೀ. ನಾಗರಾಜ ಬಿ.ಜಿ., ಮುಖ್ಯ ಅತಿಥಿಗಳಾಗಿ ಆಗಮಿಸಿ ಜಂಟಿಯಾಗಿ ಈ ಕ್ರೀಡಾ ಕೂಟವನ್ನು ಧ್ವಜಾರೋಹಣ ಮಾಡುವುದರೊಂದಿಗೆ ಹಾಗೂ ಕ್ರೀಡಾಜ್ಯೋತಿಗೆ ಚಾಲನೆ ನೀಡುವುದರ ಮೂಲಕ ಉದ್ಘಾಟಿಸಿದರು. ನಂತರ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯರ‍್ಥಿಗಳು ಪಥಸಂಚಲನ ಮಾಡಿ ಅತಿಥಿಗಳಿಗೆ ಗೌರವ ಸಲ್ಲಿಸಿದರು.

ಮುಖ್ಯ ಅತಿಥಿ ಶ್ರೀಮತಿ ಸಹನಾ ಕುಮಾರಿ ಮಾತನಾಡಿ “ನೀವೆಲ್ಲ ಇಂಜಿನಿಯರಿಂಗ್ ವಿದ್ಯರ‍್ಥಿಗಳು ಕ್ರೀಡಿಯಲ್ಲಿ ಇಷ್ಟೊಂದು ಆಸಕ್ತಿಯಿಂದ ಪಾಲ್ಗೊಳ್ಳುತ್ತಿರವುದು ಹೆಮ್ಮೆಯ ವಿಷಯವಾಗಿದ್ದು ನೀವು ಈ ಕ್ರೀಡೆಯಲ್ಲಿ ತಂತ್ರಜ್ಞಾನದಲ್ಲಿ ಬಳಕೆಯ ಕುರಿತು ಅಧ್ಯನ ಮಾಡಬೇಕು ಜೊತೆಗೆ ಕ್ರೀಡೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲು ತಂತ್ರಜ್ಞಾನ ಖಂಡಿತವಾಗಿ ಸಹಾಯ ಮಾಡುತ್ತದೆ ಎಂದು ಹೇಳಿದರು. ನಿಮ್ಮ ಈ ಇವತ್ತಿನ ಆಸಕ್ತಿ ಮುಂದಿಂದ ದಿನಗಳಲ್ಲಿ ನಮ್ಮ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಒಲಿಂಪಿಕ್ ಪಡ್ಕ ಗೆಲ್ಲುವಂತಾಗಲಿ ಎಂದು ಹಾರೈಸಿದರು.

ನಂತರ ಮಾತನಾಡಿದ ಇನ್ನರ‍್ವ ಅತಿಥಿ ನಾಗರಾಜ ಬಿ.ಜಿ ಅವರು ಮಾತನಾಡುತ್ತ ಕ್ರೀಡೆ ಮನುಷ್ಯನ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತವೆ ಆದ್ದರಿಂದ ಕ್ರೀಡೆ ವ್ಯಾಯಾಮ ಯೋಗ ಇವೆಲ್ಲವೂ ಮನುಷ್ಯನ ನಿತ್ಯ ಬದುಕಿನ ಚಟುವಟಿಕೆಯಾಗಬೇಕು ಇದರಿಂದ ಆರೋಗ್ಯಕರ ಸಮವನ್ನು ನರ‍್ಮಸಲು ಸಾಧ್ಯ ಎಂದು ಹೇಳಿದರು.

ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನ್ಯ ಕುಲಪತಿಗಳಾದ ಪ್ರೊ. ವಿದ್ಯಾಶಂಕರ ಎಸ್, ಅಧ್ಯಕ್ಷೀಯ ಮಾತುಗಳನ್ನು ಹೇಳುತ್ತ ಕ್ರೀಡೆ ದೇಹ ಆರೋಗ್ಯಕ್ಕೆ ಅವಶ್ಯವಿರುವ ಕೇವಲ ಭೌತಿಕ ಅಗತ್ಯವಿರದೆ ಇದು ವಿದ್ಯರ‍್ಥಿಗಳ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಮ ಬೀರುವದರಿಂದ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಪಠ್ಯ ಕ್ರಮದಲ್ಲಿ ಕ್ರೀಡೆ, ಏನ್ ಎಸ್ ಎಸ್ ಹಾಗೂ ಯೋಗ ವನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಹೇಳಿದರು. ವಿ ಟಿಯು ಅಧೀನ ಸಂಯೋಜಿತ ಎಲ್ಲ ಕಾಲೇಜುಗಳು ಕ್ರೀಡಾಕೂಟಗಳನ್ನು ನಡೆಸುವಂತೆ ಹಾಗೂ ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಖಡ್ಡಾಯವಾಗಿ ಭಾಗವಹಿಸಲು ಈಗಾಗಲೇ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಆರಂಭದಲ್ಲಿ ವಿ ಟಿ ಯು ಕುಲಸಚಿವರಾದ ಪ್ರೊ ಬಿ ಈ ರಂಗಸ್ವಾಮಿ ಸ್ವಾಗತಿಸಿದರು ಮತ್ತು ಮೌಲ್ಯಮಾಪನ ಕುಲಸಚಿವರಾದ ಪ್ರೊ ಟಿ ಏನ್ ಶ್ರೀನಿವಾಸ ವಂದಿಸಿದರು. ಈ ಸಮಯದಲ್ಲಿ ವೇದಿಕೆ ಮೇಲೆ ಹಣಕಾಸು ಅಧಿಕಾರಗಳಾದ ಶ್ರೀಮತಿ ಎಂ ಎ ಸಪ್ನಾ ಹಾಗೂ ವಿ ಟಿ ಯು ದೈಹಿಕ ಶಿಕ್ಷಣ ವಿಭಾಗದ ನರ‍್ದೇಶಕರಾದ ಡಾ ಪುಟ್ಟ ಸ್ವಾಮಿಗೌಡ ಹಾಜರಿದ್ದರು. ಈ ಕರ‍್ಯಕ್ರಮದಲ್ಲಿ ಸುಮಾರು ೧೫೦೦ ಕ್ಕಿಂತ ಹೆಚ್ಚಿನ ವಿದ್ಯರ‍್ಥಿಗಳು, ದೈಖಿಕ ಶಿಕ್ಶಣ ನರ‍್ದೇಶಕರುಗಳು, ವಿ ಟಿ ಯು ಸಿಬ್ಬಂದಿ ರ‍್ಗ ಹಾಜರಿತ್ತು.

ವಿ ಟಿ ಯು ಅಥ್ಲೆಟಿಕ್ ಕೂಟ – ಮೊದಲ ದಿನದ ಫಲಿತಾಂಶ

೧ ೧೦೦೦೦ ಮೀ ಓಟ (ಪುರಷರ ವಿಭಾಗ)
ಪ್ರಥಮ ಸ್ಥಾನ – ಕುಮಾರ ರಂಗನಾಥ್ ಸಿ. ರ‍್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ
ದ್ವಿತೀಯ ಸ್ಥಾನ – ತೀಶನ್ ಎ. ಎಂ., ಕೆ ವಿ ಜೆ ಇಂಜಿನಿಯರಿಂಗ್ ಕಾಲೇಜು (ದ ಕ)
ತೃತೀಯ ಸ್ಥಾನ – ಪ್ರಶಾಂತ್ ಎಸ್. ಬಿ., ರ‍್ಕಾರಿ ಇಂಜಿನಿಯರಿಂಗ್ ಕಾಲೇಜು, ಕುಶಾಲನಗರ

೨ ೧೦೦೦೦ ಮೀ ಓಟ (ಮಹಿಳಾ ವಿಭಾಗ)
ಪ್ರಥಮ ಸ್ಥಾನ – ವಿದ್ಯಾ ಸಿ ಎಸ್ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು
ದ್ವಿತೀಯ ಸ್ಥಾನ – ಮಂಜುಳಾ ಸುನಗಡ್ ಎಸ್ ಡಿ ಎಂ ಇಂಜಿನಿಯರಿಂಗ ಕಾಲೇಜು ಧಾರವಾಡ
ತೃತೀಯ ಸ್ಥಾನ – ಮಂಜುಶ್ರೀ ಎ . ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು

೩ ಎತ್ತರ ಜಿಗಿತ -ಮಹಿಳಾ ವಿಭಾಗ
ಪ್ರಥಮ ಸ್ಥಾನ – ಯಶಿತಾ ಏನ್., ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು
ದ್ವಿತೀಯ ಸ್ಥಾನ – ಮೇಘನಾ ಪಿ ಇ., ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು
ತೃತೀಯ ಸ್ಥಾನ – ಸೃಷ್ಟಿ ಬಾಲಿ, ಕೆ ಎಲ್ ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜಿ ಐ ಟಿ ), ಬೆಳಗಾವಿ.

೪ ಜಾವಲಿನ್ ಎಸೆತ -ಮಹಿಳಾ ವಿಭಾಗ
ಪ್ರಥಮ ಸ್ಥಾನ – ಮೇಘಶ್ರೀ ಕೆ., ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು
ದ್ವಿತೀಯ ಸ್ಥಾನ – ವಿದ್ಯಾ ಸಿ ಎಂ., ನಾಗರ‍್ಜುನ ಕಾಲೇಜು ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಬೆಂಗಳೂರು
ತೃತೀಯ ಸ್ಥಾನ – ರ‍್ಷಿತಾ ಪಿ ಆಳ್ವ, ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು

ಇನ್ನೂ ಉದ್ಘಾಟನಾ ಸಮಾರಂಭದಲ್ಲಿ ನಡೆದ ಕ್ರೀಡಾಕೂಟ ಪಥಸಂಚಲನದಲ್ಲಿ
೧. ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಪ್ರಥಮ ಸ್ಥಾನ
೨. ಸಿ ಎಂ ಆರ್ ಐ ಟಿ ಬೆಂಗಳೂರ್ ಗೆ ದ್ವಿತೀಯ ಸ್ಥಾನ
೩. ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಗೆ ತೃತೀಯ ಸ್ಥಾನ ಪಡೆದವು

https://pragati.taskdun.com/heavy-rainbangalorek-r-circleunder-pas-tragidygirl-death5-lakh-compensation/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button