Kannada NewsLatest

ಕೆ.ಎಲ್.ಇ. ಸಂಸ್ಥೆಯ ಮಹಾವಿದ್ಯಾಲಯದ ಪ್ರಶಂಸೆಗೆ ಪಾತ್ರನಾದ ವಿಧ್ಯಾರ್ಥಿ

ಕೆ.ಎಲ್.ಇ. ಸಂಸ್ಥೆಯ ಮಹಾವಿದ್ಯಾಲಯದ ಪ್ರಶಂಸೆಗೆ ಪಾತ್ರನಾದ ವಿಧ್ಯಾರ್ಥಿ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯವು ಪಠ್ಯದ ಜೊತೆ-ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂಚೂಣಿ ಸ್ಥಾನದಲ್ಲಿ ದಾಪುಗಾಲು ಹಾಕುತ್ತಾ ಮುನ್ನಡೆಯುತ್ತಿದೆ.

ಮಹಾವಿದ್ಯಾಲಯದ ಬಿ.ಎಸ್‌ಸಿ. ಅಂತಿಮ ವರ್ಷದ ವಿದ್ಯಾರ್ಥಿಯಾದ ಎನ್.ಸಿ.ಸಿ. ವಾಯುದಳದ ಕೆಡೆಟ್ ವಿವೇಕ ದಿಮನ ಕಜಕಿಸ್ಥಾನದಲ್ಲಿ ದಿನಾಂಕ 6-5-2019 ರಿಂದ 18-06-2019 ರವರೆಗೆ ಜರುಗಿದ ಅತ್ಯಂತ ಪ್ರತಿಷ್ಠಿತ ಅಂತರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮದ ಶಿಬಿರದಲ್ಲಿ ಭಾಗವಹಿಸಿ ಮಹಾವಿದ್ಯಾಲಯದ ಪ್ರಶಂಸೆಗೆ ಪಾತ್ರನಾಗಿದ್ದಾನೆ.

ರಾಷ್ಟ್ರೀಯ ಜಾಗೃತಿ ಮೂಡಿಸುವಿಕೆ, ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ಮತ್ತು ವಿವಿಧ ರಾಷ್ಟ್ರಗಳ ಕಲೆ ಮತ್ತು ಸಂಸ್ಕೃತಿಯನ್ನು ಕಲಿಯುವ ಧೇಯೋದ್ದೇಶದಿಂದ ನಡೆಸಿದ ಶಿಬಿರದಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಮತ್ತು ನಿರ್ದೇಶನಾಲಯದ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಕೆಡೆಟ್‌ಗಳಿಗೆ ಅಂತರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗಿಗಳಾಗಲು ನೇಮಿಸಲಾಗುತ್ತದೆ.

ಅಖಿಲ ಭಾರತದ 17 ಎನ್.ಸಿ.ಸಿ. ನಿರ್ದೇಶನಾಲಯದ ಒಟ್ಟು 2070 ಕೆಡೆಟ್ಸ್ಗಳು ಗಣರಾಜೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿರುತ್ತಾರೆ. 2070 ಕೆಡೆಟ್ಸ್ಗಳಲ್ಲಿ 105 ಕೆಡೆಟ್ಸ್ಗಳು ಅಂತರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮ ಶಿಬಿರಕ್ಕೆ ಆಯ್ಕೆಯಾಗಿದ್ದರು.

ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ. ನಿರ್ದೇಶನಾಲಯದಿಂದ ಸ್ಪರ್ಧಿಸಿದ್ದ 10 ಕೆಡೆಟ್ಸ್ಗಳಲ್ಲಿ ಮಹಾವಿದ್ಯಾಲಯದ ಕೆಡೆಟ್ ವಿವೇಕ ದಿಮನ ಪ್ರಥಮವಾಗಿ ಆಯ್ಕೆಯಾಗಿ ಅಂತರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮ ಶಿಬಿರದಲ್ಲಿ ಭಾಗವಹಿಸಿದ್ದಾನೆ. ಅಂತರಾಷ್ಟ್ರೀಯ ಯುವವಿನಿಮಯ ಕಾರ್ಯಕ್ರಮ ಶಿಬಿರದಲ್ಲಿ ಭಾಗವಹಿಸಲು ಎನ್.ಸಿ.ಸಿ. ನಿರ್ದೇಶನಾಲಯವು ಆಯೋಜಿಸಿದ ಕಠಿಣವಾದ ಅಭ್ಯಾಸ, ಲಿಖಿತ ಪರೀಕ್ಷೆ, ಗುಂಪುಚರ್ಚೆ, ವೈಯಕ್ತಿಕ ಸಂದರ್ಶನಗಳಲ್ಲಿ ಉತ್ತೀರ್ಣನಾಗಿದ್ದಾನೆ.

ವಿದ್ಯಾರ್ಥಿಯ ಎನ್.ಸಿ.ಸಿ. ಸಾಧನೆಗೆ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರು ವ ಸದಸ್ಯರು, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್.ಜಿ. ನಂಜಪ್ಪನವರ ಅವರು, ಎನ್.ಸಿ.ಸಿ. ಅಧಿಕಾರಿಗಳಾದ ಪ್ರೊ. ವ್ಹಿ.ಸಿ. ಕಾಮಗೋಳ ಮಹಾವಿದ್ಯಾಲಯದ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button