ಪ್ರಗತಿವಾಹಿನಿ ಸುದ್ದಿ; ಮೈಸೂರು: ಈಗಾಗಲೇ ಉತ್ತರ ಭಾರತದಲ್ಲಿ ಓಡುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ನವೆಂಬರ್ 10ರಂದು ದಕ್ಷಿಣ ಭಾರತದಲ್ಲೂ ಸಂಚಾರ ಶುರು ಮಾಡಲಿದೆ.
ನ.10ರಂದು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಈ ರೈಲು ಓಡಾಟ ನಡೆಸಲಿದೆ ಎಂದು ದಕ್ಷಿಣ ರೈಲ್ವೆಯ ವ್ಯವಸ್ಥಾಪಕರು ಹೇಳಿದ್ದಾರೆ. ಒಟ್ಟಾರೆ 483 ಕಿ.ಮೀ. ಮಾರ್ಗದಲ್ಲಿ ಈ ರೈಲು ಓಡಾಟ ನಡೆಸಲಿದೆ.
ಅಂದ ಹಾಗೆ, ಇದು ದೇಶದ ಐದನೇ ವಂದೇ ಭಾರತ್ ರೈಲಿನ ಸಂಚಾರವಾಗಲಿದೆ. ಅಲ್ಲದೇ, ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಸಂಚಾರವಾಗಲಿದೆ.
ಸದ್ಯ ಭಾರತದಲ್ಲಿ ನಾಲ್ಕು ವಂದೇ ಭಾರತ್ ರೈಲುಗಳು ಸಂಚಾರ ಮಾಡುತ್ತಿವೆ. ಅಂದರೆ ಈ ಮೊದಲೇ ಎರಡು ಓಡುತ್ತಿದ್ದು, ಇತ್ತೀಚೆಗಷ್ಟೇ ಮೂರು ಮತ್ತು ನಾಲ್ಕನೇ ರೈಲುಗಳನ್ನು ಇನ್ನೇನು ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಓಡಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಗುರುವಾರವಷ್ಟೇ ಹಿಮಾಚಲ ಪ್ರದೇಶದ ಉನಾದಲ್ಲಿ ಈ ರೈಲಿಗೆ ಚಾಲನೆ ನೀಡಿದ್ದರು. ಈ ಸಂಬಂಧ ಟ್ವೀಟ್ ಮಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸಚಿವಾಕಾಂಕ್ಷಿಗಳಿಗೆ ಸಧ್ಯದಲ್ಲೇ ಶುಭ ಸುದ್ದಿ
https://pragati.taskdun.com/politics/cm-basavaraj-bommaicabinet-extentionreaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ