Cancer Hospital 2
Beereshwara 36
LaxmiTai 5

ನರೇಂದ್ರ ಮೋದಿ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಿ – ಜೊಲ್ಲೆ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯ ಕಾರ್ಯಕರ್ತರಿಂದ ನಡೆದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಲು ಸಾಧ್ಯ. ವಿಕಸಿತ ಭಾರತ ಸಂಕಲ್ಪಕ್ಕಾಗಿ ಅವರ ಕೈ ಬಲಪಡಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಿ ಎಂದು ಬಿಜೆಪಿ ಅಭ್ಯರ್ಥಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಸೋಮವಾರ ತಾಲೂಕಿನ ಕೆರೂರ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭೆ ಚುನಾವಣೆ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡ್ಯೊಯಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಬೇಕೆಂದು ತಿಳಿಸಿದರು.
ನರೇಂದ್ರ ಮೋದಿಜಿ ಅವರು ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದು ಭಾರತದ ಅಭ್ಯುದಯಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ 8 ಆಸ್ಪತ್ರೆಗಳನ್ನು ಪ್ರಾರಂಭಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ. ಗೋಟೂರ- ಚಿಕ್ಕೋಡಿ ಹೈವೆ ನಿರ್ಮಾಣ ಹಾಗೂ ಕಾಕತಿ ನಿಪ್ಪಾಣಿ ಎನ್‌ಎಚ್ 4 ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿರ್ಮಾಣ ಸೇರಿದಂತೆ 8800 ಕೋಟಿ ರೂಗಳ ಅಂದಾಜಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿ ಬಹಳಷ್ಷಿರುವುದರಿಂದ ಪ್ರತಿಯೊಬ್ಬ ಕಾರ್ಯಕರ್ತರು ತಾವು ಅಣ್ಣಾಸಾಹೇಬ ಜೊಲ್ಲೆ ಎಂದು ತಿಳಿದು ಜನರಿಗೆ ಮೋದಿಯವರ ಯೋಜನೆ ಹಾಗೂ ತಾವು ಕೈಗೊಂಡ ಕೆಲಸಗಳನ್ನು ಜನರ ಗಮನಕ್ಕೆ ತಂದು ಮತ ನೀಡುವಂತೆ ಪ್ರಯತ್ನಿಸಬೇಕೆಂದರು.
ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಸಿದ್ರಾಮ ಗಡದೆ ಮಾತನಾಡಿದರು. ಅಣ್ಣಾಸಾಹೇಬ ಪಾಟೀಲ, ದುಂಡಪ್ಪಾ ಹಿಂಗ್ಲಜೆ, ಎಂ.ಎ.ಪಾಟೀಲ, ಹರೀಶ ಇನಾಂದಾರ, ರಾಜು ರೇಂದಾಳೆ, ಬಿರಪ್ಪಾ ಯಡ್ರಾಂವಿ, ಮಹಾದೇವ ಯಾದವ, ಸದಾಶಿವ ಲಠ್ಠೆ, ಮಹೇಶ ಗುರವ, ಸಂಜು ಗುಡಸೆ, ಸುರೇಶ ಹಿಂಗ್ಲಜೆ, ಬಾಬು ಖೋತ, ಸಾತಪ್ಪಾ ಖೋತ, ಗಂಗವ್ವಾ ಮಾಂಗನೂರೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Emergency Service


Bottom Add3
Bottom Ad 2