Latest

ಚಿಲುಮೆ ಕಚೇರಿಯಲ್ಲಿ ಸಚಿವರಿಗೆ ಸೇರಿದ ಚೆಕ್ ಪತ್ತೆ; ಆ ಸಚಿವರು ಯಾರು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮತದಾರರ ಪಟ್ಟಿ ಪರೀಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಸಚಿವರೊಬ್ಬರಿಗೆ ಸೇರಿದ ಚೆಕ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ವೋಟರ್ ಐಡಿ ಅಕ್ರಮಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ನಾಪತ್ತೆಯಾಗಿದ್ದಾರೆ. ರವಿಕುಮಾರ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಲ್ಲದೇ ರವಿಕುಮಾರ್ ಪತ್ನಿ ಸಂಸ್ಥೆಯ ನಿರ್ದೇಶಕಿ ಐಶ್ವರ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ನಡುವೆ ಚಿಲುಮೆ ಸಂಸ್ಥೆಯ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಸಚಿವರೊಬ್ಬರಿಗೆ ಸೇರಿದ ಚೆಕ್, ಎನ್ವಲಪ್ ಕವರ್, ಲೆಟರ್ ಹೆಡ್ ಹಾಗೂ ಹೊಂಬಾಳೆ ಸಂಸ್ಥೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಎಲ್ಲವನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಹಲವು ಐಡಿ ಕಾರ್ಡ್ ಗಳು, ನೋಟ್ ಕೌಂಟಿಂಗ್ ಮಷಿನ್ ಕೂಡ ಪತ್ತೆಯಾಗಿದೆ.

ಚಿಲುಮೆ ಸಂಸ್ಥೆ ಕಚೇರಿಯಲ್ಲಿ ಸಿಕ್ಕಿರುವ ಚೆಕ್ ಯಾವ ಸಚಿವರಿಗೆ ಸೇರಿದ್ದು? ಕಚೇರಿಯಲ್ಲಿ ಮನಿ ಬ್ಲ್ಯಾಕ್ ಆಂಡ್ ವೈಟ್ ಮಾಡುವ ದಂಧೆ ನಡೆಯುತ್ತಿದ್ದುದು ನಿಜವೇ? ಸಂಸ್ಥೆಯಿಂದ ಬೃಹತ್ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.

Home add -Advt

ವೋಟರ್ ಐಡಿ ಗೋಲ್ ಮಾಲ್; ಮುಖ್ಯಸ್ಥರಿಬ್ಬರು ನಾಪತ್ತೆ; ಪತ್ನಿಯರು ಪೊಲೀಸ್ ವಶಕ್ಕೆ

https://pragati.taskdun.com/voter-id-scame2-arrestedchilume-ngo/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button