Kannada NewsLatest

ವಿಶೇಷ ಚೇತನರ ಮತ ಜಾಗೃತಿ: ಬೈಕ್ ಜಾಥಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದ ಛತ್ರಪತಿ ಶಿವಾಜಿ ಮೈದಾನದಲ್ಲಿ ಮತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ತಾಲೂಕ ಪಂಚಾಯಿತಿ ಹಾಗೂ ಕಂಗ್ರಾಳಿ ಬಿ.ಕೆ. ಗ್ರಾಪಂ ವತಿಯಿಂದ ಆಯೋಜಿಸಿದ್ದ ವಿಶೇಷ ಚೇತನರ ಮತ ಜಾಗೃತಿ ಬೈಕ್ ಜಾಥಾ ಕಂಗ್ರಾಳಿ ಬಿ.ಕೆ ಹಾಗೂ ಕಂಗ್ರಾಳಿ ಕೆ.ಎಚ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿವಿದ ಬೀದಿಗಳ ಬೈಕ್ ಮುಖಾಂತರ ಸಂಚರಿಸಿ ಕಡಿಮೆ ಮತದಾನವಾಗಿರುವ ಗ್ರಾಮಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.

ಸಹಾಯಕ ನಿರ್ದೇಶಕ (ಪಂಚಾಯತ ರಾಜ್) ಗಣೇಶ ಕೆ.ಎಸ್., ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೆ.ಐ. ಬರಗಿ ತಾಲೂಕು ಐಇಸಿ ಸಂಯೋಜಕ ರಮೇಶ ಮಾದರ, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

Home add -Advt
https://pragati.taskdun.com/the-mla-put-the-bjp-in-trouble-after-watching-a-sex-video-in-the-house/
https://pragati.taskdun.com/a-young-man-shouted-slogans-of-pakistan-zindabad-in-a-crowded-area/
https://pragati.taskdun.com/folk-art-is-the-basic-culture-of-india-mahantesh-patil/

Related Articles

Back to top button