*ಡಿಸಿಸಿ ಬ್ಯಾಂಕ್ ಚುನಾವಣೆ: ಮತದಾನ ಆರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇಂದು ಬೆಳಗ್ಗೆಯಿಂದಲೆ ಮತದಾನ ಆರಂಭವಾಗಿದೆ.
ಬೈಲಹೊಂಗಲ 73, ಕಿತ್ತೂರು 29, ಅಥಣಿ 125, ರಾಯಬಾಗ 205, ಹುಕ್ಕೇರಿ 90, ರಾಮದುರ್ಗ 35, ನಿಪ್ಪಾಣಿ 119 ಪಿಕೆಪಿಎಸ್ ಸದಸ್ಯರು ಮತದಾನ ನಡೆಸಲಿದ್ದಾರೆ.
16 ನಿರ್ದೇಶಕ ಸ್ಥಾನಗಳ ಪೈಕಿ ಈಗಾಗಲೆ 9 ನಿರ್ದೇಶಕರ ಅವಿರೋಧ ಆಯ್ಕೆಯಾಗಿದೆ. 7 ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಇಂದು ಮತದಾನ ಆರಂಭವಾಗಿದೆ.
ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಬಿ.ಕೆ.ಮಾಡೆಲ್ ಸ್ಕೂಲ್ ನಲ್ಲಿ ಮತದಾನ ಆರಂಭವಾಗಿದೆ. ಮತದಾನದ ಹಕ್ಕು ಪಡೆದ ಅರ್ಹ ಪಿಕೆಪಿಎಸ್ ಸದಸ್ಯರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ನಡೆಯಲಿದ್ದು, ಬಳಿಕ ಸಂಜೆ 4 ಗಂಟೆಯಿಂದ ಮತ ಏಣಿಕೆ ಪ್ರಕ್ರಿಯೆ ಪ್ರಾರಂಭ ನಡೆಯಲಿದೆ.
ಮತ ಏಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳು, ಏಜೆಂಟ್, ಪೊಲೀಸ್, ಚುನಾವಣಾ ಸಿಬ್ಬಂದಿಗಳಿಗೆ ಮೊಬೈಲ್ ನಿಷೇಧಿಸಲಾಗಿದೆ. ಗೌಪ್ಯ ಮತದಾನ ಇರೋದ್ರಿಂದ ಯಾರೇ ಮತ ಬಹಿರಂಗ ಪಡಿಸಿದ್ರೆ ಮತ ಅನರ್ಹ ಮಾಡಲಾಗುತ್ತೆ.