Karnataka NewsLatest

ಫೆ. 8 ರಂದು ವಿಟಿಯು 19ನೇ ಘಟಿಕೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೧೯ ನೇ ಘಟಿಕೋತ್ಸವ ಫೆಬ್ರವರಿ ೮ ರಂದು ಜ್ಞಾನ ಸಂಗಮ ಆವರಣದಲ್ಲಿರುವ ಡಾ. ಎ. ಪಿ. ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಕುಲಪತಿ  ಡಾ. ಕರಿಸಿದ್ದಪ್ಪ ಅವರು ತಿಳಿಸಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಶನಿವಾರ ( ಫೆ.೧ ) ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
೧೯ ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿ ಅಧ್ಯಕ್ಷರಾಗಿರುವ ಪ್ರೋ.ಕೆ.ಕೆ. ಅಗರವಾಲ್ ಅವರು ಆಗಮಿಸಲಿದ್ದಾರೆ. ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ. ಅಶ್ವತ ನಾರಾಯಣ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.
೧೯ ನೇ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಅವರಿಗೆ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರಧಾನ ಮಾಡಲಿದ್ದೇವೆ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ೧೯ನೇ ಘಟಿಕೋತ್ಸವದಲ್ಲಿ ಬಿ.ಇ ವಿಭಾಗದಲ್ಲಿ ೫೮,೮೨೭, ಬಿ ಆರ್ಕ್ ವಿಭಾಗದಲ್ಲಿ ೭೪೪, ಎಂ.ಬಿ.ಎ ವಿಭಾಗದಲ್ಲಿ ೪,೬೦೬, ಎಂ.ಸಿ.ಎ ವಿಭಾಗದಲ್ಲಿ ೧,೩೨೫, ಎಂ.ಟೆಕ್ ವಿಭಾಗದಲ್ಲಿ ೧೫೮೨, ಎಂ. ಆರ್ಕ್ ವಿಭಾಗದಲ್ಲಿ ೩೯, ಪಿ. ಎಚ್.ಡಿ ವಿಭಾಗದಲ್ಲಿ ೪೭೯ ಹಾಗೂ ಎಂ. ಎಸ್ಸಿ ವಿಭಾಗದಲ್ಲಿ ೨೧ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಮಹಿಮಾ ರಾವ್‌ಗೆ ೧೩ ಚಿನ್ನದ ಪದಕ:

Mahima S. Rao

ಮಂಗಳೂರಿನ ಸೆಂಟ್ ಜೋಸೆಪ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿನಿ ಮಹಿಮಾ ರಾವ್ ಅವರು ೧೩ ಚಿನ್ನದ ಪದಕ ಪಡೆದುಕೊಂಡದ್ದಾರೆ.

 

 

ಮೂಡಬಿದರೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸನ್ಮತಿ ಪಾಟೀಲ್ ಅವರು ೧೧ ಚಿನ್ನದ ಪದಕ ಪಡೆದುಕೊಂಡ್ಡಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಬೆಂಗಳೂರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ವಿದ್ಯಾ ಜಿ. ಎಸ್ ಅವರು ೭ ಚಿನ್ನದ ಪದಕ ಪಡೆದುಕೊಂಡರೆ, ಮೈಸೂರಿನ ಜಿ.ಎಸ್.ಎಸ್.ಎಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಪಾರ್ ಉಮೇನ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ದಿವ್ಯ ಚೆಟ್ಟಿ ಅವರು ಹಾಗೂ ಪುತ್ತೂರಿನ ವೀವೆಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಸಿಂಧೂರಾ ಸರಸ್ವತಿ ಅವರು ತಲಾ ೬ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ ಅವರು ತಿಳಿಸಿದರು.
೧೯ ನೇ ಘಟಿಕೋತ್ಸವದ ನಿಮಿತ್ಯ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಾಗಿ ಫೆಬ್ರವರಿ ೮ ರಂದು ಬೆಳಗ್ಗೆ ೬ ಗಂಟೆಯಿಂದ ೮ ಗಂಟೆಯವರೆಗೆ ಚೆನ್ನಮ್ಮ ವೃತ್ತದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ವೇಳೆ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಕಲಸಚಿವರಾದ ಪ್ರೋ. ಆನಂದ ಎಸ್. ದೇಶಪಾಂಡೆ,
ಮೌಲ್ಯಮಾಪನ ಕುಲಸಚಿವರಾದ ಪ್ರೋ. ಸತೀಶ ಅಣ್ಣಿಗೇರಿ ಉಪಸ್ಥಿತರಿದ್ದರು.

19th Annual Convocation of VTU

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button