Kannada NewsKarnataka NewsLatest

ರಾಷ್ಟ್ರದ ಶ್ರೇಷ್ಠ 100 ವಿವಿಗಳಲ್ಲಿ ವಿಟಿಯು

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್ಐಆರ್ ಎಫ್) ಆಧರಿಸಿ ಭಾರತ ಸರ್ಕಾರದ ಶ್ರೇಯಾಂಕ ಸರಣಿ ೨೦೨೦ ರಲ್ಲಿ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್ ಐ ಆರ್ ಎಫ್) ಆಧರಿಸಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೨೦ ರ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕದ ಐದನೇ ಆವೃತ್ತಿಯನ್ನು ಪ್ರಕಟಿಸಿದೆ.

ಇದರಲ್ಲಿ ರಾಜ್ಯದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ( ವಿ ತಾ ವಿ), ಬೆಳಗಾವಿ ರಾಷ್ಟ್ರದ ಅತ್ತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ೧೦೦ ಶ್ರೇಷ್ಠ ಸಂಸ್ಥೆಗಳಲ್ಲಿ ೫೫ನೇ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಪಡೆದ ಸಂಸ್ಥೆಗಳಾದ ಐಐಟಿಗಳು, ಐಐಐಟಿಗಳು, ಎನ್‌ಐಟಿಗಳು ಮತ್ತು ಇತರೆ ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ದೇಶದ ವಿಶ್ವವಿದ್ಯಾಲಯಗಳಿವೆ. ವಿ ತಾ ವಿ ರಾಷ್ಟ್ರದ ಶ್ರೇಷ್ಟ ೧೦೦ ವಿಶ್ವವಿದ್ಯಾಲಯಗಳ (ತಾಂತ್ರಿಕ ಮತ್ತು ತಾಂತ್ರಿಕೇತರ) ವಿಭಾಗದಲ್ಲಿ ೮೦ ನೇ ಸ್ಥಾನವನ್ನು ಪಡೆದಿದೆ ಹಾಗೆಯೇ ಮ್ಯಾನೇಜ್ಮೆಂಟ್ ವಿಭಾಗದಲ್ಲಿಯೂ ವಿ ತಾ ವಿ ೭೧ ನೇ ಸ್ಥಾನದಲ್ಲಿದೆ.

ವಿ ತಾ ವಿ ಸುಮಾರು ೨೦ ವರ್ಷಗಳ ಹಳೆಯ ವಿಶ್ವವಿದ್ಯಾಲಯವಾದರೂ ಶ್ರೇಷ್ಠ ೧೦೦ ರಲ್ಲಿ ಸ್ಥಾನ ಪಡೆಯುವುದರ ಮುಖಾಂತರ ಅದ್ಭುತ ಸಾಧನೆ ಮಾಡಿದೆ. ಇದು ವಿ ತಾ ವಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನೀಡುತ್ತಿರುವ ಉತ್ತಮ ಗುಣಮಟ್ಟ ಶಿಕ್ಷಣದ ವ್ಯವಸ್ಥೆಯನ್ನು, ಯುವ ಪೀಳಿಗೆಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಕೈಗಾರಿಕೆ ವಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚಗೆ ಒಳಪಡಿಸಿ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಕೆಲವು ಕ್ರಾಂತಿಕಾರಿ ಕ್ರಮಗಳನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದನ್ನು ಪ್ರತಿಬಿಂಬಿಸುತ್ತದೆ.
ಈ ಎಲ್ಲ ಯೋಜನೆಗಳಿಂದ ಇದೇ ಮೊದಲ ಬಾರಿಗೆ ವಿ ತಾ ವಿ ಪ್ರತಿಷ್ಠಿತ ಶ್ರೇಯಾಂಕದಲ್ಲಿ ಉತ್ತಮ ಸ್ಥಾನವನ್ನು ಪಡೆದಿದೆ.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್ ಐ ಆರ್ ಎಫ್) ಮುಖಾಂತರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ವಿಶ್ವವಿದ್ಯಾಲಯಗಳನ್ನು ಮತ್ತು ಸಂಸ್ಥೆಗಳನ್ನು ಅಲ್ಲಿಯ ಬೋಧನೆ, ಕಲಿಕೆ, ಸಂಪನ್ಮೂಲಗಳ, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ; ಪದವಿ ಫಲಿತಾಂಶಗಳು, ಸಾಮಾಜಿಕ ಪಾಲ್ಗೊಳ್ಳುವಿಕೆ ಮತ್ತು ಸಂಸ್ಥೆಗಳ ಮೇಲಿರುವ ಸಾರ್ವಜನಿಕ ಗ್ರಹಿಕೆ. ಈ ಅಂಶಗಳ ಬಗ್ಗೆ ಅತ್ಯಂತ ಕಠಿಣವಾದ ಮಾನದಂಡಗಳೊಂದಿಗೆ ಮೌಲ್ಯಮಾಪನ ಮಾಡಿ ಈ ಶ್ರೇಯಾಂಕಗಳನ್ನು ಭರತ್ ಸರ್ಕಾರ ಪ್ರಕಟಿಸುತ್ತದೆ.
ವಿ ತಾ ವಿ ಯ ಈ ಸಾಧನೆಗೆ ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ ವಿ ತಾ ವಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಹಾಗೂ ಸತತ ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕಾಗಿ  ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿ ವಜುಭಾಯಿ ವಾಲಾ, ಕರ್ನಾಟಕದ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,   ಉಪಮುಖ್ಯಮಂತ್ರಿಗಳು ಮತ್ತು ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳಾದ ಡಾ. ಸಿ. ಎನ್. ಅಶ್ವಥ ನಾರಾಯಣ್, ವಿಶ್ವವಿದ್ಯಾಲಯಗಳ ಸಕ್ಷಮ ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಇವರುಗಳಿಗೆ ಕುಲಪತಿಗಳು ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button