Belagavi NewsBelgaum NewsKannada NewsKarnataka News

*ವಿಟಿಯು ರ್ಯಾಂಕ್‌ ವಿಜೇತ ಕೆಎಲ್‌ಇ ವಿದ್ಯಾರ್ಥಿಗಳಿಗೆ ಡಾ. ಪ್ರಭಾಕರ ಕೋರೆಯವರಿಂದ ಅಭಿನಂದನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ನಿನ್ನೆ ಜರುಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್.ಶೇಷಗಿರಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆಯನ್ನು ಗೈದು ಸಂಸ್ಥೆಗೆ ಹಾಗೂ ಮಹಾವಿದ್ಯಾಲಯಕ್ಕೆ ಕೀರ್ತಿತಂದಿದ್ದಾರೆ.

ಬಿ.ಇ. ಸಿವಿಲ್ ಇಂಜಿನಿಯರಿಂಗ್‌ದಲ್ಲಿ ಕುಮಾರ ಸಾಹಿಲ್ ಎಂ. ಸೋಮನಾಚೆ ಪ್ರಥಮ ರ್ಯಾಂಕ್‌ದೊಂದಿಗೆ 12 ಚಿನ್ನದ ಪದಕಗಳನ್ನು ಹಾಗೂ ನಗದು ಬಹುಮಾನ ಪಡೆದಿದ್ದಾನೆ. ಬಯೋಮೆಡಿಕಲ್ ಇಂಜಿನಿಯರಿಂಗ್‌ನಲ್ಲಿ ಕುಮಾರಿ ಕೀರ್ತಿ ಎಸ್. ಸೊಲಂಕಿ ಪ್ರಥಮ ರ್ಯಾಂಕ್‌ ದೊಂದಿಗೆ ಚಿನ್ನದ ಪದಕ, ಕುಮಾರಿ ಸ್ನೇಹಲ್ ಎಸ್. ಜಬಡೆ ದ್ವಿತೀಯ ಬ್ಯಾಂಕ್ ಹಾಗೂ ಕುಮಾರಿ ಅಂಕಿತಾ ಎ. ಗರಡೆ 7ನೇ ರ್ಯಾಂಕ್ ಪಡೆದಿದ್ದಾರೆ. ಕೆಮಿಕಲ್ ಇಂಜಿನಿಯರಿಂಗ್‌ದಲ್ಲಿ, ಕುಮಾರ ಜೀವನ ತೃತೀಯ ರಾಂಕ್, ಕುಮಾರಿ ನಿಖಿತಾ ಎಂ. ಗಾವಡೆ 5ನೇ ಬ್ಯಾಂಕ್, ಕುಮಾರಿ ಜಾಹ್ನವಿ ವಿ. ಜೀರಂಕಳಿ 6ನೇ ರ್ಯಾಂಕ್ ಹಾಗೂ ಕುಮಾರ ಸಾಹಿಲ್ ಮುಲ್ಲಾ 7ನೇ ರಾಂಕ್ ಪಡೆದಿದ್ದಾರೆ. ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ಸ್ ಇಂಜಿನಿಯರಿಂಗ್‌ದಲ್ಲಿ ಕುಮಾರ ಆದಿತ್ಯಾ ವಿ. ಕುಲಕರ್ಣಿ 10ನೇ ರಾಂಕ್ ಪಡೆದಿದ್ದಾನೆ.ಈ ಬ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಕೆಎಲ್‌ಇ ಪ್ರಧಾನ ಕಚೇರಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಪುಷ್ಪಗುಚ್ಛವನ್ನು ನೀಡಿ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು. ಇದರೊಂದಿಗೆ ‘ತಾವೆಲ್ಲರೂ ಸ್ನಾತಕೋತ್ತರ ಶಿಕ್ಷಣವನ್ನು ಪಡೆದು ಬಲಿಷ್ಠ ರಾಷ್ಟ್ರನಿರ್ಮಾಣದಲ್ಲಿ ಕೈಜೋಡಿಸಬೇಕು. ಈ ಸಾಧನೆಯು ನಿರಂತರವಾಗಿ ಮುಂದುವರೆಯಬೇಕೆಂದು’ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಬಿ.ಜಿ.ದೇಸಾಯಿ, ಕಾಲೇಜಿನ ಪ್ರಾಚಾರ್ಯ ಡಾ.ಸುಭಾಷ ಎಫ್. ಪಾಟೀಲ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button