Belagavi NewsBelgaum NewsKannada NewsKarnataka NewsNational

*ವಿ ಟಿ ಯು ಕುಲಪತಿ ಪ್ರೊ. ವಿದ್ಯಾಶಂಕರ ಎಸ್. ಹಾಗೂ ಎನ್ ಎಸ್ ಎಫ್ ನಿರ್ದೇಶಕ ಸೇತುರಾಮ ಭೇಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ ವಿದ್ಯಾಶಂಕರ ಎಸ್ ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನದ ನ್ಯಾಷನಲ್ ಸೈನ್ಸ ಫೌಂಡೇಶನ್ (ಎನ್ ಎಸ್ ಎಫ್) ನ ಅಧ್ಯಕ್ಷರಾದ ಡಾ ಸೇತುರಾಮ ಪಂಚನಾಥನ್ ಅವರನ್ನು ಭೇಟಿಯಾಗಿ ಸಂವಾದ ಮತ್ತು ಚರ್ಚೆ  ನಡೆಸಿದರು. 

ಮೂಲತಃ ಭಾರತೀಯರಾದ ಡಾ ಸೇತುರಾಮ ಅವರು ಪ್ರಸ್ತುತ ಯು ಎಸ್ ಎ ಯ ಪ್ರಖ್ಯಾತ ಸಂಸ್ಥೆ ನ್ಯಾಷನಲ್ ಸೈನ್ಸ ಫೌಂಡೇಶನ್ (ಎನ್ ಎಸ್ ಎಫ್) ೧೫ ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಈ ಹುದ್ದೆಗೆ ಅಮೇರಿಕಾದ ಅಧ್ಯಕ್ಷರಿಂದ ನಾಮನಿರ್ದೇಶಿತರಾಗಿದ್ದಾರೆ. ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ ಒಂದು ಅಮೇರಿಕಾ ಸರ್ಕಾರದ  ಸ್ವತಂತ್ರ ಸಂಸ್ಥೆಯಾಗಿದ್ದು ವಿಜ್ಞಾನ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಇನ್ನೋವೆಶನ್ ಗೆ ಉತ್ತೇಜನ ಮತ್ತು ಸಹಕಾರವನ್ನು ನೀಡುತ್ತದೆ. 

ಪುಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಸಂಸ್ಥೆಯ ಘಟಿಕೋತ್ಸವದ ಸಂದರ್ಭದಲ್ಲಿ ವಿ ಟಿ ಯು ಕುಲಪತಿ ಪ್ರೋ ವಿದ್ಯಾಶಂಕರ ಎಸ್. ಅವರು ಡಾ. ಸೇತುರಾಮ ಅವರನ್ನು ಭೇಟಿಯಾಗಿ ಎನ್ ಎಸ್ ಎಫ್ ಹಾಗೂ ವಿ ಟಿ ಯು ಶಿಕ್ಷಣ, ಸಂಶೋಧನೆ ಹಾಗೂ ಇನ್ನೋವೆಶನ್ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಸಹಯೋಗದೊಂದಿಗೆ ಜೊತೆಯಲ್ಲಿ ಕೆಲಸ ಮಾಡಬಹುದು ಎಂಬ ವಿಷಯಗಳ ಬಗ್ಗೆ  ಚರ್ಚಿಸಲಾಯಿತು.  ನಂತರ ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್ ಎಸ್. ಅವರು ಡಾ ಸೇತುರಾಮ ಅವರನ್ನು ಕರ್ನಾಟಕದಲ್ಲಿ ವಿ ಟಿ ಯು ಅಡಿಯಲ್ಲಿ ಬರುವ ಎಲ್ಲ ಬೋಧಕ ಹಾಗೂ ವಿದ್ಯಾರ್ಥಿಗಳನ್ನ ಉದ್ದೇಶಿಸಿ  ಉಪನ್ಯಾಸ ನೀಡಲು ಆಹ್ವಾನಿಸಿದರು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಈ ಸಂದರ್ಭದಲ್ಲಿ ವಿ ಟಿ ಯುನ ಟೆಲಿಕಾಮ್ ಸೆಂಟರ್ ಆಫ್ ಎಕ್ಸಲೆನ್ಸ್ ನ ವಿಶೇಷಾಧಿಕಾರಿ ಪ್ರೊ ಅಜಿಯ ಪ್ರದ್ಯಾನ ಹಾಗೂ  ವಿ ಟಿ ಯು ಕಾರ್ಯಕಾರಿ ಪರಿಷತ್ ನ ಮಾಜಿ ಸದಸ್ಯ ಸಂಜೀವ ಕುಬಕಡ್ಡಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button