Belagavi NewsBelgaum NewsKannada NewsKarnataka NewsLatest

*ವಿದ್ಯುತ್ ಬಿಲ್ ನೋಡಿ ಶಾಕ್ ಆದ VTU*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಒಂದೆಡೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಸರ್ವರ್ ಸಮಸ್ಯೆ ಕಾಡುತ್ತಿದ್ದರೆ, ಮತ್ತೊಂದೆಡೆ ವಿದ್ಯುತ್ ಬಿಲ್ ಹೆಚ್ಚಳದಿಂದ ಕೈಗಾರಿಕಾ ಕಂಪನಿಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು‌ ಮುಂದಾಗಿವೆ. ಇದರ ನಡುವೆ ಬೆಳಗಾವಿಯಲ್ಲಿರುವ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಈ ತಿಂಗಳ ವಿದ್ಯುತ್ ಬಿಲ್ ಬರೋಬ್ಬರಿ 5 ಲಕ್ಷ ರೂ. ಹೆಚ್ಚುವರಿಯಾಗಿ ಬಂದಿರವುದು ಆಡಳಿತ ಮಂಡಳಿಗೆ ಶಾಕ್ ನೀಡಿದೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 18 ಲಕ್ಷ ಬಿಲ್ ನೀಡಿದ ಹೆಸ್ಕಾಂ. ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ವಿದ್ಯುತ್ ಬಿಲ್‌ ನೋಡಿ ಆಘಾತಗೊಂಡಿದ್ದಾರೆ. ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್ ದರ ಏರಿಕೆ ಹಿನ್ನಲೆಯಲ್ಲಿ ಬೆಳಗಾವಿಯ ವಿಟಿಯುಗೆ 5 ಲಕ್ಷ ರೂ ಹೆಚ್ಚುವರಿ ಬಿಲ್ ಬಂದಿದೆ.

ರಾಜ್ಯದ ಐದು ಕಡೆ ವಿಭಾಗೀಯ ಕೇಂದ್ರಗಳನ್ನು ಹೊಂದಿರುವ ವಿಟಿಯು ವಿಭಾಗೀಯ ಕೇಂದ್ರ ಹಾಗೂ ವಿಟಿಯು ಕ್ಯಾಂಪಸ್ ಸೇರಿ ಜೂನ್ ತಿಂಗಳಲ್ಲಿ 35 ಲಕ್ಷ ಬಿಲ್ ಬಂದಿದೆ. ಬೆಳಗಾವಿಯಲ್ಲಿರುವ ವಿಟಿಯು ಕ್ಯಾಂಪಸ್‌ದಷ್ಟೇ ಈ ತಿಂಗಳು 18 ಲಕ್ಷ ಬಿಲ್ ನ್ನು ಹೆಸ್ಕಾಂ ಸಿಬ್ಬಂದಿ ನೀಡಿದ್ದಾರೆ. ವಿಟಿಯು ಮುಖ್ಯ ಕ್ಯಾಂಪಸ್ ಸೇರಿ 6 ವಿಭಾಗೀಯ ಕೇಂದ್ರಗಳ ಮೇ ತಿಂಗಳ ವಿದ್ಯುತ್ ಬಿಲ್ 35 ಲಕ್ಷ ರೂ ಬಂದಿದೆ.

ಮಾರ್ಚ್ ತಿಂಗಳಲ್ಲಿ 25,56,928 ರೂ, ಎಪ್ರಿಲ್ ತಿಂಗಳಲ್ಲಿ 25,29,021 ರೂ, ವಿದ್ಯುತ್ ಬಿಲ್ ಪಾವತಿಸಿದ್ದ ವಿಟಿಯು, ಮೇ ತಿಂಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಹೆಸ್ಕಾಂ 35,05,869 ಬಿಲ್ ನೀಡಿದೆ. ಏಕಾಏಕಿ ಹೆಚ್ಚುವರಿ ಬಿಲ್ ಬಂದಿರುವುದಕ್ಕೆ ಹೆಸ್ಕಾಂ‌ಗೆ ಪತ್ರಬರೆಯಲು ವಿಟಿಯು ಮುಂದಾಗಿದ್ದು, ಗೊಂದಲ ಬಗೆಹರೆದ ಬಳಿಕವಷ್ಟೇ ವಿದ್ಯುತ್ ಬಿಲ್ ಪಾವತಿಸಲು ನಿರ್ಧರಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button