Kannada NewsLatestWorld

*ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ಮತ್ತೆ ಯುದ್ಧ*

ಪ್ರಗತಿವಾಹಿನಿ ಸುದ್ದಿ: ಅಫ್ಘಾನಿಸ್ತಾನ ನಡೆಸಿದ ಮಿಲಿಟರಿ ದಾಳಿಗೆ ಪ್ರತಿಕಾರವಾಗಿ ಶುಕ್ರವಾರ ಬೆಳ್ಳಂಬೆಳಗ್ಗೆ ಕಾಬೂಲ್‌ ಮತ್ತು ಇತರ 2 ಅಫ್ಘಾನ್‌ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. 

ಪಾಕಿಸ್ತಾನದ ಮೇಲೆ ಅಫ್ಘಾನಿಸ್ತಾನ ನಡೆಸಿದ ಮಿಲಿಟರಿ ದಾಳಿಯಲ್ಲಿ ಪಾಕಿಸ್ತಾನದ 55 ಸೈನಿಕರು ಹತ್ಯೆಗೀಡಾಗಿದ್ದರು, ಅಲ್ಲದೇ 23 ಮಂದಿಯನ್ನ ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಇದಕ್ಕಾಗಿ ಪಾಕಿಸ್ತಾನ ದಾಳಿ ನಡೆಸಿದೆ.

ಕಾಬೂಲ್‌ನಲ್ಲಿ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿದೆ. ಕಾಬೂಲ್  ಕಂದಹಾರ್ ಮತ್ತು ಪಕ್ತಿಯಾ ಸ್ಥಳಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಆದ್ರೆ ದಾಳಿಯಲ್ಲಿ ಸಂಭಾವ್ಯ ಸಾವು ನೋವುಗಳ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ.

ವಿವಾದಿತ ಡುರಾಂಡ್ ರೇಖೆಯ ಉದ್ದಕ್ಕೂ ಮಿಲಿಟರಿ ನೆಲೆಗಳು ಮತ್ತು ಔಟ್‌ಪೋಸ್ಟ್‌ಗಳನ್ನ ತನ್ನ ಪಡೆಗಳು ವಶಪಡಿಸಿಕೊಂಡಿವೆ ಎಂದು ತಾಲಿಬಾನ್ ಹೇಳಿಕೊಂಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ವಾಯುದಾಳಿ ನಡೆಸಿದೆ.

Home add -Advt

ಈ ಬೆನ್ನಲ್ಲೇ ಡುರಾಂಡ್ ರೇಖೆ ಎಂದು ಕರೆಯಲ್ಪಡುವ 2,611 ಕೀಮೀ ಉದ್ದದ ಗಡಿ ಹಾಗೂ ಗಡಿಯ ಇನ್ನೊಂದು ಭಾಗವಾದ ಟೋರ್ಖಾಮ್‌ನಲ್ಲಿಯೂ ಉಭಯ ದೇಶಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಜೊತೆಗೆ ಪಾಕಿಸ್ತಾನ ಸೇನೆ ಗಡಿ ಗ್ರಾಮಗಳನ್ನ ಖಾಲಿ ಮಾಡಿಸಿದೆ.

Related Articles

Back to top button