Kannada NewsLatest

ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿಗಳಿಗೆ ಭವ್ಯ ಸ್ವಾಗತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜೈನ ಸಮಾಜದ ಮುನಿಗಳಾದ ಆಚಾರ್ಯ ಶ್ರೀ. ೧೦೮ ವರ್ಧಮಾನ ಸಾಗರ ಮುನಿಗಳು ಮತ್ತು ಅವರ ಸಂಘ ಇಂದು ಶುಕ್ರವಾರ ಸಾಯಂಕಾಲ ಬೆಳಗಾವಿ ನಗರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಜೈನ ಸಮಾಜದ ವತಿಯಿಂದ ಶ್ರೀಗಳಿಗೆ ಭವ್ಯ ಸ್ವಾಗತ ಕೋರಲಾಯಿತು.
ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ಬೆಳಗಾವಿ ಉಪ ನಗರ ಅನಗೋಳದಿಂದ ಹೊರಟ ಶ್ರೀಗಳು ೩ ಗಂಟೆಗೆ ಹಿಂದವಾಡಿ ಬಸದಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಹಿಂದವಾಡಿಯ ಭಗವಾನ ೧೦೦೮ ಶ್ರೀ ಚಂದ್ರಪ್ರಭ ದಿಗಂಬರ ಜೈನ ಬಸದಿ ಸಮಿತಿಯ ಪದಾಧಿಕಾರಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು. ತದನಂತರ ಶ್ರೀಗಳನ್ನು ಮೆರವಣಿಗೆ ಮೂಲಕ ಬೆಳಗಾವಿ ನಗರಕ್ಕೆ ಬರಮಾಡಿಕೊಳ್ಳಲಾಯಿತು.
ಮೆರವಣಿಗೆ ಸಂದರ್ಭದಲ್ಲಿ ಜೈನ ಸಮಾಜದ ಹಿರಿಯರಾದ ಉದ್ಯಮಿ ಬಾಳಾಸಾಹೇಬ ಪಾಟೀಲ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ವಿನೋದ ದೊಡ್ಡಣ್ಣವರ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಪದಾಧಿಕಾರಿಗಳು  ಶ್ರೀಗಳ ಪಾದಪೂಜೆ ನೆರವೇರಿಸಿದರು.
ಹಿಂದವಾಡಿಯಿಂದ ಪ್ರಾರಂಭಗೊಂಡ ಮೆರವಣಿಗೆಯು ಶಹಾಪೂರ ಕೋರೆ ಗಲ್ಲಿ, ಹೊಸುರ, ಪಾಟ್ಸ್‌ನ್ ಕ್ರಾಸ, ಹಳೆ ಪಿ.ಬಿ.ರಸ್ತೆ ಮೂಲಕ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಇಲ್ಲಿ ಆಗಮಿಸಿತು.

ಈ ಸಂದರ್ಭದಲ್ಲಿ ಚಾತುರ್ಮಾಸ ಸಮಿತಿಯ ಪುಷ್ಪಕ ಹನಮಣ್ಣವರ, ಹೀರಾಚಂದ ಕಲಮನಿ, ಶ್ರೀಪಾಲ ಖೇಮಲಾಪೂರೆ, ಅಭಯ ಅವಲಕ್ಕಿ, ಸನತಕುಮಾರ ವಿ.ವಿ., ಕೀರ್ತಿಕುಮಾರ ಕಾಗವಾಡ , ಸನ್ಮತಿ ಕಸ್ತೂರಿ, ಕುಂತಿನಾಥ ಕಲಮನಿ ಸೇರಿದಂತೆ ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿಗಳು ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗನಲ್ಲಿ ಒಂದು ವಾರ ಕಾಲ ವಾಸ್ತವ್ಯ ಮಾಡಲಿದ್ದು, ತದ ನಂತರ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button