ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸದೇ ಕೆಲಸಗಳನ್ನು ವಿಳಂಬ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಸರ್ವೇ ಇಲಾಖೆ ಹಾಗೂ ಭೂದಾಖಲೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಲೋಕಾಯುಕ್ತ ಎಸ್.ಪಿ. ಆರ್.ಅರ್. ಅಂಬಡಗಟ್ಟಿ ಎಚ್ಚರಿಕೆ ನೀಡಿದರು.
ಅವರು ಶನಿವಾರ ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ತಾಲೂಕಿನ ಅಂಕಲಿ ಗ್ರಾಮದಲ್ಲಿ ಗ್ರಾಮದ ನಕ್ಷೆಯ ಮೂಲಕ ಸರ್ವೇಮಾಡಿ ರಸ್ತೆಮಾಡಲು ಅನೂಕೂಲ ಮಾಡಿಕೂಡಬೇಕೆಂದು ಗ್ರಾಮಸ್ಥರು ಹಲವಾರು ಬಾರಿ ಪ್ರತದ ಮೂಲಕ ಮನವಿ ಸಲ್ಲಿಸಿದರೂ ಕೂಡ ವಿಳಂಬ ಮಾಡುವುದಲ್ಲದೆ, ಗ್ರಾಮಸ್ಥರು ಕಚೇರಿಗೆ ತೆರಳಿ ಮೌಖಿಕವಾಗಿ ವಿನಂತಿ ಕೊಂಡರೂ ಕೂಡ ಹಾರಿಕೆ ಉತ್ತರ ನೀಡುತ್ತಾರೆಂದು ತಾನಾಜಿ ಪವಾರ ಅಧಿಕಾರಿಗಳಿಗೆ ತಿಳಿಸಿದ್ದರು.
ಲೋಕಾಯುಕ್ತರು ಸರ್ವೇ ಅಧಿಕಾರಿ ವಿನಾಯಕ ಗಾಯಕವಾಡ ಅವರನ್ನು ಕರೆಯಿಸಿ ತರಾಟೆಗೆ ತಗೆದುಕೊಂಡು ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದರು. ಗ್ರಾಹಕರಿಂದ ಹಣ ಪಡೆದು ಸರ್ವೇಕಾರ್ಯಗಳನ್ನು ಮಾಡುತ್ತಿದ್ದೀರೆಂದು ದೂರುಗಳು ಬಂದಿವೆ. ಇದು ಸರಿಯಲ್ಲ ಎಂದರು.
ಸಂಕೇಶ್ವರ ಹಾಗೂ ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ಸರ್ವೇ ಇಲಾಖೆಯ ವಿರುದ್ದ ಸಾರ್ವಜನಿಕರಿಂದ ದೂರಗಳು ದಾಖಲಾಗಿವೆ, ತಾಲೂಕಿನ ನಾನಾ ಗ್ರಾಮಗಳಲ್ಲಿ ರಸ್ತೆ, ಚರಂಡಿ ಸಮುದಾಯ ಭವನ ಸೇರಿದಂತೆ ಇನ್ನಿತರ ಕೆಲವು ಕಾಮಗಾರಿಗಳನ್ನು ಮಾಡದೇ ಖರ್ಚು ಹಾಕಿ ಹಣ ಪಡೆಯಲಾಗಿದೆ ಎಂದು ಸಾರ್ವಜನಿಕರಿಂದ ದೂರಗಳಿವೆ ಅವುಗಳನ್ನು ಪರೀಶಿಲಿಸಲಾಗುತ್ತಿದೆ ಎಂದರು.
ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೂಡುವಲ್ಲಿ ವಿಳಂಬ ಹಾಗೂ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ದ ಸಾರ್ವಜನಿಕರ ದೂರುಗಳನ್ನು ನಿಗಪಡಿಸಿದ ಪತ್ರದಲ್ಲಿ ನೀಡಬಹುದಾಗಿದೆ. ಅವುಗಳನ್ನು ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳುವ ದೂರಗಳನ್ನು ಅಲ್ಲಿನ ಸ್ಥಳಿಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರತಯತ್ನಿಸಲಾಗುವುದೆಂದರು.
ಹುಕ್ಕೇರಿ ಪಟ್ಟಣದ ಗಾಂಧಿನಗರದ ಹೃದಯಭಾಗದಲ್ಲಿ ಚರ್ಮಗಾರಿಕೆ ಕೆಲಸ ನಡೆಯುತ್ತಿದೆ, ಈ ಚರ್ಮಗಾರಿಕೆ ವಾಸನೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ಶೀಘ್ರದಲ್ಲಿ ಸ್ಥಳಾಂತರ ಮಾಡಲು ಮಲ್ಲಪ್ಪಾ ಕೋಟಗಿ ಅವರು ಅಧಿಕಾರಿಗಳಿಗೆ ದೂರು ನೀಡಿ ವಿನಂತಿಸಿದರು.
ಶಿರಹಟ್ಟಿ ಬಿಕೆ ಗ್ರಾಮದಲ್ಲಿ ೨ಎಕರೆ ೯ ಗುಂಟೆ ಜಮೀನು ಕಂದಾಯ ಇಲಾಖೆ ಅಧಿಕಾರಿಗಳು ಸುಳ್ಳು ದಾಖಲಾತಿ ಸೃಷ್ಟಿಸಿ ಭೂಮಿಯನ್ನು ಬೇರೆಯವರ ಹೆಸರು ದಾಖಲೆ ಮಾಡಿದ್ದಾರೆ, ಇದರ ಬಗ್ಗೆ ತಹಸಿಲ್ದಾರ ಅವರಿಗೆ ಹಲವಾರು ಬಾರಿ ಪರಿಶೀಲಿಸಿ ನ್ಯಾಯ ದೊರಕಿಸಿಕೂಡಬೇಕೆಂದು ವಿನಂತಿಸಿದರೂ ಕೂಡ ಯಾವುದೇ ಕ್ರಮ ಜರುಗಿಸಿಲ್ಲ, ಇದರಿಂದ ನನಗೆ ಅನ್ಯಾಯವಾಗಿದ್ದು ನ್ಯಾಯ ದೊರೆಕಿಸಿಕೂಡಬೇಕೆಂದು ಬಸವರಾಜ ಬೆಳವಿ ಅಧಿಕಾರಿಗಳಿಗೆ ವಿನಂತಿಸಿಕೊಂಡರು.
ಲೋಕಾಯುಕ್ತ ಅಧಿಕಾರಿಗಳು ಕೆಲವೊಂದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ವೇದಿಕೆ ಹತ್ತಿರ ಕರೆಯಿಸಿ ಗುಸುಗುಸು ಮಾತನಾಡುವುದರಿಂದ ಅಧಿಕಾರಿಗಳಿಗೆ ವಿಷಯ ಗೊತ್ತಾಗದೇ ಗೊಂಧಲ ಉಂಟಾಯಿತು.
ಲೋಕಾಯುಕ್ತ ಅಧಿಕಾರಿಗಳಾದ ಎಸ್,ಡಿ, ಹಳ್ಳೂರ, ಪಿ.ಆರ್ ದವಾಲಿ, ಎಸ್.ಕೆ ಕಾಲೋಜಿ , ಸಿಬ್ಬಂದಿಯವರಾದ ಆರ್.ಬಿ ಗೋಕಾಕ, ಎಸ್ ಎಮ್ ಝಖೋತ, ವಿ ಎಸ್ ಮಾಳಮರಡಿ, ತಹಶೀಲ್ದಾರ ರೇಷ್ಮಾ ತಾಳಿಕೋಟಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎಮ್ ಎಸ್, ಬಿರಾದಾರ ಪಾಟೀಲ, ಗ್ರೇಡ್ ೨ ತಹಶಿಲ್ದಾರ ಕಿರಣ ಬೆಳವಿ, ತಾ.ಪಂ ವ್ಯವಸ್ಥಾಪಕ ಆರ್.ಎ. ಚಟ್ನಿ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ