ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಬೆಳಗಾವಿ ನಾಕಾ ಬಳಿಯ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿರುವ ಯುದ್ಧ ಸ್ಮಾರಕದಲ್ಲಿ ಪ್ರದರ್ಶನಗೊಳ್ಳಲಿರುವ ಬೃಹತ್ ಆಕಾರದ ವಿಮಾನ ಗೋವಾದಿಂದ ನಗರಕ್ಕೆ ಮಂಗಳವಾರ ಬಂದಿದೆ.
4 ದೊಡ್ಡ ಲಾರಿಗಳ ಮೂಲಕ ಈ ಯುದ್ಧವಿಮಾನದ ಬಿಡಿಭಾಗಗಳು ಬಂದಿವೆ. ಶೀಘ್ರದಲ್ಲೇ ಈ ವಿಮಾನದ ಬಿಡಿಭಾಗಗಳನ್ನು ಜೋಡಿಸಿ ಬೃಹತ್ ವಿಮಾನವನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಇದನ್ನು ನೋಡಲು ನಾಗರಿಕರಲ್ಲಿ ಕುತೂಹಲ ಮೂಡಿದೆ.
ಸ್ಥಳೀಯ ವಿದ್ಯಾರ್ಥಿಗಳಿಗೆ, ಯುವಕರಿಗೆ ಇದು ದೇಶದ ಸೇವೆಗಾಗಿ ಪ್ರೇರಣೆ ಸಿಗಲಿ ಎಂಬ ಸದುದ್ದೇಶದಿಂದ ಕೇಂದ್ರ ಸಕಾರವು ಈ ಮ್ಯುಜಿಯಂಗೆ ಅನುಮತಿ ನೀಡಿ ವಿಮಾನವನ್ನು ನಗರಕ್ಕೆ ಕಳುಹಿಸಿದೆ.
ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ನಗರದಲ್ಲಿ ಯುದ್ಧವಿಮಾನ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಅದರಂತೆ ಈ ಯುದ್ಧ ವಿಮಾನವು ನಗರಕ್ಕೆ ಆಗಮಿಸಿದೆ. ಇದಕ್ಕೆ ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ವಿಮಾನ ರಾಜಾ ಛತ್ರಪತಿ ಶಿವಾಜಿ ಉದ್ಯಾನವನದ ಸೌಂದರ್ಯೀಕರಣದ ಜೊತೆಗೆ ಯುದ್ಧವಿಮಾನದ ಸ್ಥಾಪಿನೆ ಕಾರ್ಯ ನಡೆಯಲಿದೆ. ತಾಲೂಕು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ನಿಜವಾದ ಯುದ್ಧ ವಿಮಾನವನ್ನು ನೋಡಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ