
ಪ್ರಗತಿವಾಹಿನಿ ಸುದ್ದಿ: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ಪ್ರೆಸ್ ರೈಲಿಗೆ ಸರಳು ಬಡಿದು ಡೀಸೇಲ್ ಟ್ಯಾಂಕ್ ಲೀಕ್ ಆಗಿ ರೈಲು 2 ಗಂಟೆಗಳ ಕಾಲ ವಿಳಂಬವಾದ ಘಟನೆ ಚನ್ನಪಟ್ಟಣ ಸಮೀಪ ನಡೆದಿದ್ದು, ಈ ಘಟನೆಯ ಹಿಂದೆ ದುಷ್ಕೃತ್ಯದ ಶಂಕೆ ವ್ಯಕ್ತವಾಗಿದೆ.
ಚನ್ನಪಟ್ಟಣ ಸಮೀಪದ ವಂದಾರಗುಪ್ಪೆ ಬಳಿ ರೈಲು ಕೆಟ್ಟು ನಿಂತಿದ್ದನ್ನು ಸಿಬ್ಬಂದಿ ಪರಿಶೀಲಿಸಿದಾಗ ಡೀಸೆಲ್ ಟ್ಯಾಂಕ್ಗೆ ಕಬ್ಬಿಣ ಸರಳು ಬಡಿದು ಸೋರಿಕೆಯಾಗುತ್ತಿದ್ದುದು ಕಂಡುಬಂದಿದೆ. ನಂತರ ಸ್ಥಳದಲ್ಲಿದ್ದ ರೈಲ್ವೆ ಸಿಬ್ಬಂದಿ ಅದನ್ನು ಪರಿಶೀಲಿಸಿದ್ದಾರೆ.
ಡೀಸೆಲ್ ಟ್ಯಾಂಕ್ ಸೋರಿಕೆಯಾದ ಪರಿಣಾಮ 2 ಗಂಟೆಗಳ ಕಾಲ ರೈಲು ಕೆಟ್ಟು ನಿಂತಿತ್ತು. ಇದಾದ ಬಳಿಕ ಮತ್ತೊಂದು ಎಂಜಿನ್ ಸಹಾಯದಿಂದ ಬೆಂಗಳೂರು ಕಡೆಗೆ ರೈಲನ್ನು ಚಾಲನೆ ಮಾಡಲಾಯಿತು.
ಈ ಘಟನೆಯ ಬೆನ್ನಲ್ಲೇ ಇದು ದುಷ್ಕರ್ಮಿಗಳ ಕೃತ್ಯ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಘಟನೆಯ ಹಿಂದೆ ದುಷ್ಕರ್ಮಿಗಳ ಕೈವಾಡವಿದೆಯೇ ಎಂದು ತನಿಖೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.



