*ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನೀಡಿದ ಮಾಧ್ಯಮ ಪ್ರತಿಕ್ರಿಯೆ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಇ.ಡಿ. ವಿಚಾರಣೆ ಒಂದು ಹಂತಕ್ಕೆ ಮುಕ್ತಾಯವಾಗಿದೆ. ಎರಡು ಮೂರು ದಿನಗಳಲ್ಲಿ ಕೆಲವು ದಾಖಲೆ ನೀಡುವಂತೆ ಕೇಳಿದ್ದಾರೆ. ನಾನು ಸಮಯಾವಕಾಶ ಕೋರಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಇಡಿ ವಿಚಾರಣೆ ಮುಗಿಸಿ ಬೆಂಗಳೂರಿಗೆ ಬಂದ ಅವರು ರಾತ್ರಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದರು.
ಯಂಗ್ ಇಂಡಿಯಾ ಸಂಸ್ಥೆಗೆ ಹಣ ನೀಡಿರುವ ಬಗ್ಗೆ ಅವರು ಮಾಹಿತಿ ಕೇಳಿದರು. ಜವಾಹರಲಾಲ್ ನೆಹರು ಹಾಗೂ ಗಾಂಧಿ ಅವರ ಕಾಲದಲ್ಲಿ ನಮ್ಮ ಮುಖಂಡರು ಮಾಡಿರುವ ಸಂಸ್ಥೆಗಳಿಗೆ ನಾವು ಹಣ ನೀಡಿದ್ದೇವೆ ಎಂದು ಹೇಳಿದ್ದೇವೆ. ಅವರು ನೀವು ಹಣ ಯಾಕೆ ಕೊಟ್ಟಿರಿ? ಹೇಗೆ ಕೊಟ್ಟಿರಿ? ಅದರ ಮೂಲ ಏನು ಎಂದು ಕೇಳಿದ್ದಾರೆ.
ರಾಜಕಾರಣವನ್ನು ಫೀಲ್ಡ್ ನಲ್ಲಿ ಮಾಡಬೇಕೇ ಹೊರತು ತನಿಖಾ ಸಂಸ್ಥೆಯ ಕಚೇರಿಯಲ್ಲಿ ಅಲ್ಲ. ಭಾರತ ಜೋಡೋ ಪಾದಯಾತ್ರೆ ನಿಮಿತ್ತ ರಾಹುಲ್ ಗಾಂಧಿ ಅವರು ನಮ್ಮ ಭಾಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದರೂ ನಾನು ಇವತ್ತು ಯಾತ್ರೆಯಲ್ಲಿ ಭಾಗವಹಿಸಲು ಆಗಿಲ್ಲ. ಇವತ್ತೇ ಈ ವಿಚಾರಣೆ ಮಾಡುವ ಅಗತ್ಯ ಏನಿತ್ತು? ನಾನು ಅ. 23 ರ ನಂತರ ಯಾವುದೇ ದಿನ ವಿಚಾರಣೆಗೆ ಕರೆದರೂ ಬರುತ್ತೇನೆ ಎಂದು ಸಮಯ ಕೇಳಿದ್ದರೂ ಅವಕಾಶ ನೀಡಲಿಲ್ಲ. ಇವತ್ತೇ ಹಾಜರಾಗುವಂತೆ ಸೂಚಿಸಿದ್ದರು. ಅಂತಹ ಪ್ರಮೇಯವೆನಿತ್ತು ಎಂದು ಪ್ರಶ್ನಿಸಿದರು.
https://pragati.taskdun.com/politics/ed-summonceyoung-india-cased-k-shivakumar/
https://pragati.taskdun.com/latest/we-are-not-those-who-trample-and-grow-lakshmi-hebbalkar-in-mudalagi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ