ಪ್ರಗತಿವಾಹಿನಿ ಸುದ್ದಿ: ಕಳೆದ 12 ವರ್ಷಗಳಿಂದ ನೀರಿನ ದರವನ್ನು ಹೆಚ್ಚಳ ಮಾಡಿಲ್ಲ. ಇದರಿಂದ ಜಲಮಂಡಳಿಯ ಆರ್ಥಿಕ ಸ್ಥಿತಿ ಕಷ್ಟದಲ್ಲಿದೆ. ದರ ಹೆಚ್ಚಳ ಮಾಡಿದರೆ ವಿರೋಧ ವ್ಯಕ್ತವಾಗುತ್ತದೆ. ಆದರೂ ಮಂಡಳಿಯ ಉಳಿವಿಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಿಡ್ಬ್ಲೂಎಸ್ ಎಸ್ ಬಿ ನೌಕರರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು ನೀರಿನ ದರ ಏರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ರೈತ ಸಗಣಿ ಬಾಚಿ, ಹಸು ಕಟ್ಟಿಕೊಂಡು ಕಷ್ಟಪಡುತ್ತಾನೆ. ಆತ ಕೊಡುವ ಹಾಲಿಗೆ 2 ರೂಪಾಯಿ ಬೆಲೆ ಹೆಚ್ಚಳ ಮಾಡಿದರೆ ಬಡಿದಾಡುತ್ತಾರೆ. ಒಂದು ಲೀಟರ್ ನೀರಿನ ಬಾಟಲಿ ದರ 25 ರೂಪಾಯಿ ಇದೆ. ರೈತನ ಬಗ್ಗೆ ಕಾಳಜಿಯಿಲ್ಲ. ಆದರೆ ಬಾಟಲಿ ನೀರಿಗೆ ಎಷ್ಟು ದುಡ್ಡು ಬೇಕಾದರೂ ಕೊಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆರೆಗಳನ್ನ ಉಳಿಸಲು ಹೊಸ ಯೋಜನೆ
ಬೆಂಗಳೂರು ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಇಲಾಖೆಯ ವ್ಯಾಪ್ತಿಗೆ ತೆಗೆದುಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ಉಳಿಸಿಕೊಳ್ಳಲಾಗುವುದು. ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸುವ ಮೂಲಕ ಕೆರೆಗಳನ್ನು ಉಳಿಸುವ ಕೆಲಸ ಮಾಡಲಾಗುವುದು. ಇದರಿಂದ ಒತ್ತುವರಿಯನ್ನು ತಡೆಯಬಹುದು” ಎಂದರು.
ನೂತನ ಬಿಲ್ ಅಲ್ಲಿ ಬಿಡಿಎ ಮತ್ತು ಬಿಡ್ಲ್ಬೂ ಎಸ್ ಎಸ್ ಬಿಯನ್ನು ವಿಲೀನ ಮಾಡಬೇಕು ಎನ್ನುವ ಸಲಹೆ ಬಂದಿತ್ತು. ನಾನು ಒಪ್ಪಿಗೆ ನೀಡಲಿಲ್ಲ. ನಿಮ್ಮನ್ನು ರಾಜಕಾರಣಕ್ಕೆ ಎಳೆಯುವುದು ಬೇಡ ಇಲಾಖೆಯ ಸ್ವಾಯತ್ತತೆ ಉಳಿಯಲಿ ಎಂದು ತೀರ್ಮಾನ ಮಾಡಿದೆ. ವಿಲೀನವಾದಷ್ಟು ಕಷ್ಟವಾಗಿತ್ತದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ