
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಕ್ತಿ ದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಜಲ ದಿಗ್ಬಂಧನ ಎದಿರಾಗಿದ್ದು, ನೀರಿನಲ್ಲೆ ದೇವಿಯ ಪೂಜೆ ನೇರವೆರಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಪ್ರಸಿದ್ಧ ಸುಕ್ಷೇತ್ರ ಕೊಕಟನೂರು ಯಲ್ಲಮ್ಮ ಕ್ಷೇತ್ರದಲ್ಲಿ ಮಳೆಯ ಹೆಚ್ಚಾಗಿರುವ ಕಾರಣ ದೇವಸ್ಥಾನಕ್ಕೆ ದೇವಸ್ಥಾನಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ದೇವಸ್ಥಾನದ ಗರ್ಭಗುಡಿಗೂ ನೀರು ಪ್ರವೇಶ ಮಾಡಿದ್ದರಿಂದ ಶ್ರಾವಣ ಮಾಸದ ಪೂಜಾ ಕೈಂಕರ್ಯಗಳಿಗೂ ಸಹ ಅಡೆತಡೆ ಉಂಟಾಗಿದೆ. ಆದರೂ ಸಹ ಪೂಜಾರಿಗಳು ನಡುಮಟ್ಟದ ನೀರಿನಲ್ಲಿಯೇ ಪೂಜಾ ಕೈಂಕರ್ಯಗಳನ್ನು ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ಅಥಣಿ ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆರೆ ಖೋಡಿ ಬಿದ್ದು ನೀರು ದೇವಸ್ಥಾನ ಪ್ರವೇಶಿಸಿದೆ. ನೀರು ದೇವಸ್ಥಾನದ ಒಳಗೆ ಹೋಗಬಾರದೆಂದು ಇತ್ತಿಚಿಗಷ್ಟೆ 35 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಮುಂದೆ ಕೆನಾಲ್ ನಿರ್ಮಾಣ ಮಾಡಲಾಗಿತ್ತು. ಕೆನಾಲ್ ನಿರ್ಮಾಣ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಇತ್ತಿಚಿಗಷ್ಟೆ ಇತಿಹಾಸ ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೂ ಸಹ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಈಗ ಕೊಕಟನೂರು ಯಲ್ಲಮ್ಮ ದೇವಸ್ಥಾನಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.