Kannada NewsKarnataka NewsPolitics

*ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ: ಪ್ರಕರಣದ ಬಗ್ಗೆ ಹೋಮ್ ಮಿನಿಸ್ಟರ್ ಹೇಳಿದ್ದೇನು…? *

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹಲ್ ಚಲ್ ಎಬ್ಬಿಸಿರುವ ನಟ ದರ್ಶನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವರು, ಚಿತ್ರದುರ್ಗ ಮೂಲದ ವ್ಯಕ್ತಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿಸಲಾಗಿದೆ.‌ ಕೊಲೆ ಪ್ರಕರಣದಲ್ಲಿ ಕೆಲವರನ್ನು ಬಂಧನ ಮಾಡಲಾಗಿತ್ತು. ಇವರ ವಿಚಾರಣೆ ಸಂದರ್ಭದಲ್ಲಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಇದರಿಂದ ನಟ ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. 

ಇದು ತನಿಖೆಯ ಒಂದು ಭಾಗ. ತನಿಖೆ ಮುಗಿಯುವವರೆಗೆ ಏನೂ ಹೇಳಲು ಬಾರದು. ಈ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿದ್ದೇಕೆ? ಯಾವ ಕಾರಣಕ್ಕಾಗಿ ಕೊಲೆ ಪ್ರಕರಣದಲ್ಲಿ ಭಾಗಿಯಾದರು ಅಥವಾ ಭಾಗಿಯಾಗಿದ್ದರಾ ಇಲ್ವಾ ಇವೆಲ್ಲ ಪ್ರಶ್ನೆಗಳಿಗೆ ತನಿಖೆ ನಂತರ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.‌

Home add -Advt

Related Articles

Back to top button