*ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತ: ನೀರು ಮಿತವಾಗಿ ಬಳಸಲು ಬೆಳಗಾವಿ ಪಾಲಿಕೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಸ್ತುತ ಮುಂಗಾರು ಮಳೆಯ ಅಭಾವದ ಕಾರಣ, ಬೆಳಗಾವಿ ಮಹಾನಗರಕ್ಕೆ ನೀರು ಸರಬರಾಜು ಮಾಡುವ, ರಕ್ಕಸಕೊಪ್ಪ ಜಲಾಶಯ ಹಾಗೂ ಹಿಡಕಲ್ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿತವಾಗಿರುತ್ತದೆ. ಮಹಾನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆಯನ್ನು ನಿಭಾಯಿಸಲು ಈ ಕೆಳಗಿನಂತೆ ತುರ್ತು ಕ್ರಮ ತೆಗೆದುಕೊಳ್ಳಲಾಗಿದೆ.
ಪ್ರಸ್ತುತ 24/7 ವಲಯಗಳಿಗೆ ದಿನನಿತ್ಯ 2 ತಾಸಿನವರೆಗೆ ನೀರನ್ನು ಸರಬರಾಜು ಮಾಡಲಾಗುವುದು. 4 ರಿಂದ 5 ದಿನಗಳಿಗೊಮ್ಮೆ 3 ರಿಂದ 4 ತಾಸಿನವರೆಗೆ ನೀರು ಸರಬರಾಜು ಮಾಡುತ್ತಿರುವ ಪ್ರದೇಶಗಳಿಗೆ ನೀರು ಸರಬರಾಜು ಸಮಯವನ್ನು 1 ರಿಂದ 1.5 ತಾಸಿನವೆರೆಗೆ ಇಳಿಸಲಾಗುವುದು. ಹಾಲಿಯಿರುವ 745 ಬೋರ್‌ವೆಲ್ ಹಾಗೂ 68 ತೆರೆದ ಬಾವಿಗಳಿಗೆ ಅಳವಡಿಸಿದ ಯಂತ್ರೋಪಕರಣಗಳನ್ನು (ಬಳಕೆಗೆ ಮಾತ್ರ ಉಪಯೋಗಿಸಲು) ಸುಸ್ಥಿತಿಯಲ್ಲಿ ಇಡಲಾಗಿದೆ. ಕುಡಿಯುವ ನೀರನ್ನು ಕುದಿಸಿ, ಆರಿಸಿ ಕುಡಿಯಲು ಹಾಗೂ ಮಿತವಾಗಿ ಬಳಸಲು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




