ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಶನಿವಾರ ಇಡೀ ದಿನ ಸತತ ವರ್ಷಧಾರೆಯ ಪರಿಣಾಮ ತಾಲ್ಲೂಕಿನ ಲೋಂಡಾ ಗ್ರಾಮದ ಬಳಿ ಹರಿಯುವ ಪಾಂಡರಿ ನದಿಯಲ್ಲಿ ಪ್ರವಾಹವೇರ್ಪಟ್ಟಿದ್ದರಿಂದ ಲೋಂಡಾ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ಕೆಲಕಾಲ ಜಲಾವೃತಗೊಂಡ ಘಟನೆ ಸಂಭವಿಸಿದೆ.
ಶನಿವಾರ ಮಧ್ಯಾಹ್ನದ ಬಳಿಕ ಲೋಂಡಾ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪಾಂಡರಿ ನದಿಯ ನೀರು ಹರಿದುಬಂದಿದ್ದರಿಂದ ಕೆಳ ಸೇತುವೆ, ಪ್ರವೇಶದ್ವಾರ, ರೈಲ್ವೆ ಹಳಿಗಳು, ಮೊದಲ ಪ್ಲಾಟ್
ಫಾರ್ಮ್ ಸೇರಿದಂತೆ ರೈಲು ನಿಲ್ದಾಣ ಮತ್ತು ಅಕ್ಕಪಕ್ಕದ ತಗ್ಗು ಪ್ರದೇಶದಲ್ಲಿ ನೀರು
ನುಗ್ಗಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೇಲ್ವೆ ಇಲಾಖೆ ಲೋಂಡಾ ಜಂಕ್ಷನ್
ಮೂಲಕ ಸಂಚರಿಸುವ ಎಲ್ಲ ರೈಲುಗಳನ್ನು ಎರಡು ಮತ್ತು ಮೂರನೇ ಪ್ಲಾಟ್ ಫಾರ್ಮ್ ಮೂಲಕ
ಸಂಚರಿಸುವಂತೆ ಮಾಡಿದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ.
ಶನಿವಾರ ಸಂಜೆಯ ನಂತರ ಮಳೆಯ ಅಬ್ಬರ ಕುಗ್ಗಿದ್ದರಿಂದ ಪ್ರವಾಹ ಇಳಿಮುಖಗೊಂಡಿತು. ಭಾನುವಾರ ಮುಂಜಾನೆ ರೈಲ್ವೆ ಪ್ಲಾಟ್ ಫಾರ್ಮ್ ಮತ್ತು ಇತರ ಪ್ರದೇಶಗಳು ಪ್ರವಾಹದಿಂದ ಮುಕ್ತವಾದವು ಎಂದು ಲೋಂಡಾ ಗ್ರಾ.ಪಂ ಪಿಡಿಒ ಬಾಲರಾಜ್ ಭಜಂತ್ರಿ ತಿಳಿಸಿದರು.
ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ: ಪರಿಸ್ಥಿತಿ ಪರಿಶೀಲಿಸಿದ ಡಿಸಿ, ಎಸ್ಪಿ, ಸಿಇಒ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ