ಖಾನಾಪುರ ತಾಲೂಕಿನಲ್ಲಿ ನಿಸರ್ಗ ಸ್ವರ್ಗ ಸೃಷ್ಟಿಸಿರುವ ಜಲಧಾರೆಗಳು; ಆರಿದ್ರಾ ಮಳೆ ಅರಳಿಸಿದ ಅದ್ಭುತ ಲೋಕ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಎಡೆಬಿಡದೆ ಸುರಿಯುತ್ತಿರುವ ಆರಿದ್ರಾ ಮಳೆ ತಾಲೂಕಿನ ಹಲವೆಡೆ ಜಲಧಾರೆಗಳಿಗೆ ಜೀವ ತುಂಬಿದೆ. ಮಲೆನಾಡಿನ ಮಡಿಲಿನ ನೀರಧಾರೆಗಳ ಭೋರ್ಗೆರೆತ ನಿಸರ್ಗ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.
ಪಶ್ಚಿಮಘಟ್ಟದ ಶೃಂಗದ ದಟ್ಟಾರಣ್ಯದ ನಡುವೆ ಅನೇಕ ಜಲಪಾತಗಳು ಇದೀಗ ಮೈತುಂಬಿಕೊಂಡಿದ್ದು ಜನಾಕರ್ಷಿಸುತ್ತಿವೆ. ವೀಕೆಂಡ್ ಬಂತೆಂದರೆ ಜನ ಸ್ನೇಹಿತರು, ಕುಟುಂಬಸ್ಥರೊಂದಿಗೆ ಹೋಗಿ ಎಂಜಾಯ್ ಮಾಡಲು ಕಾತುರರಾಗುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಷ್ಟೇ ಅಲ್ಲದೆ, ಪಕ್ಕದ ಗೋವಾ, ಮಹಾರಾಷ್ಟ್ರ ಭಾಗಗಳ ಜನರೂ ಈ ಜಲಧಾರೆಗಳನ್ನು ಕಣ್ತುಂಬಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಕೆಲ ಜಲಪಾತಗಳಿಗೆ ಎಡೆಬಿಡದೆ ಸುರಿವ ಮಳೆಯಲ್ಲೂ ಬೆವರಿಳಿಸುವ ಕಡಿದಾದ ರಸ್ತೆಗಳಲ್ಲಿ ಹೆಜ್ಜೆಯಿಡುತ್ತ ಚಾರಣದ ಮಜ ಅನುಭವಿಸುತ್ತಿದ್ದಾರೆ.
ಖಾನಾಪುರ ತಾಲೂಕಿನ ಆಯ್ದ ಕೆಲವು ಜಲಪಾತಗಳ ರೋಮಾಂಚಕ ನೋಟ ಇಲ್ಲಿದೆ:
ಸುರಕ್ಷಿತತೆ ನಿಮ್ಮದಾಗಲಿ:
ಜಲಪಾತಗಳ ವೀಕ್ಷಣೆಗೆ ತೆರಳುವ ಬಹುತೇಕ ಜನ ಅವುಗಳ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು, ಜಲಪಾತದಡಿ ಸ್ನಾನಕ್ಕಿಳಿಯುವುದು ಸಾಮಾನ್ಯವಾಗಿದೆ. ಆದರೆ ಈ ಸಂದರ್ಭದಲ್ಲಿ ಅನೇಕರು ನಿಸರ್ಗ ಸೌಂದರ್ಯ ಸವಿಯಯುವ ಭರದಲ್ಲಿ ಸುರಕ್ಷಿತತೆ ಕಡೆಗಣಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ಹೀಗಾಗಿ ಕೆಲ ಜಲಪಾತಗಳಿಗೆ ಅರಣ್ಯ ಇಲಾಖೆಯವರು ಪರವಾನಗಿ ಇಲ್ಲದೇ ಪ್ರವೇಶ ನೀಡುತ್ತಿಲ್ಲ. ಪ್ರವೇಶ ಪಡೆದವರು ಸ್ವಯಂ ಪ್ರೇರಣೆಯಿಂದ ಸುರಕ್ಷಿತತೆಯ ಬಗ್ಗೆ ಗಮನ ನೀಡುವುದನ್ನು ಮರೆಯಕೂಡದೆಂಬ ಕಳಕಳಿಯನ್ನು ಆಡಳಿತ ವ್ಯಕ್ತಪಡಿಸಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾದ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ