
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2026-27 ರ ನೇರಪ್ರಸಾರವನ್ನು ಇಂದು ನಗರದಲ್ಲಿರುವ ಬಿಜೆಪಿ ಗ್ರಾಮಾಂತರ ಜಿಲ್ಲಾ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರು ವೀಕ್ಷಣೆ ಮಾಡಿದರು.
ನಂತರ ಕೇಂದ್ರ ಸರ್ಕಾರದ ಜನಪರ ಬಜೆಟ್ ಮಂಡನೆ ಸ್ವಾಗತಿಸಿ ಸಿಹಿ ಹಂಚುವ ಮೂಲಕ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ, ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ,ಅರವಿಂದ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷರಾದ ಯಲ್ಲೇಶ್ ಕೋಲಕಾರ, ಯುವ ಮೋರ್ಚಾ ಅಧ್ಯಕ್ಷರಾದ ಮಹಾಂತೇಶ ಚಿನ್ನಪ್ಪಗೌಡರ, ಕೋಶಾದ್ಯಕ್ಷರಾದ, ಸಂತೋಷ್ ದೇಶನೂರ, ಚೇತನ ಅಂಗಡಿ, ವೀರಭದ್ರ ಪೂಜಾರಿ, ಸುಭಾಷ ಸಣ್ಣವೀರಪ್ಪನವರ,ಆನಂದ ಅತ್ತುಗೋಳ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.



