ಪ್ರಗತಿವಾಹಿನಿ ಸುದ್ದಿ, ಕೋಲ್ಕೊತ್ತಾ: ಟ್ರೋಫಿ ಪ್ರದಾನ ಸಮಾರಂಭದಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾದ ಫುಟ್ ಬಾಲ್ ಆಟಗಾರನನ್ನು ತಳ್ಳಿದ ಪಶ್ಚಿಮ ಬಂಗಾಳದ ರಾಜ್ಯಪಾಲ ಲಾ ಗಣೇಶನ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಡ್ಯುರಾಂಡ್ ಕಪ್ ಫೈನಲ್ ನಂತರ ವಿಜೇತ ಬೆಂಗಳೂರಿನ ಎಫ್ ಸಿ ತಂಡದ ನಾಯಕ ಸುನೀಲ್ ಛೆಟ್ರಿ ಅವರು ಟ್ರೋಫಿ ಪ್ರದಾನ ಸಮಾರಂಭದಲ್ಲಿ ಟ್ರೋಫಿ ಸ್ವೀಕರಿಸುವಾಗ ರಾಜ್ಯಪಾಲ ಲಾ ಗಣೇಶನ್ ಅವರು ಸುನೀಲ್ ಅವರನ್ನು ತಳ್ಳುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಾಲತಾಣಿಗರು ರಾಜ್ಯಪಾಲರನ್ನು ಹುಗ್ಗಾಮುಗ್ಗಾ ಟೀಕಿಸಿದ್ದಾರೆ. ಅನೇಕ ಜನ “ಆಟಗಾರರನ್ನು ಗೌರವಿಸಿ” ಎಂದು ರಾಜ್ಯಪಾಲರಿಗೆ ಸಲಹೆ ಕೂಡ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ