Belagavi NewsBelgaum NewsKarnataka News

*ಮುಸುಗುಪ್ಪಿ ಗ್ರಾಮದಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಪ್ರವಾಹದ ಅಬ್ಬರ; ಮನೆ, ಬ್ಯಾಂಕ್, ಅಂಗಡಿಗಳು ಮುಳುಗಡೆ*

ಪ್ರಗತಿವಾಹಿನಿ ಸುದ್ದಿ: ಘಟಪ್ರಭಾ ನದಿ ಆರ್ಭಟಕ್ಕೆ ಬೆಳಗಾವಿ ಜಿಲ್ಲೆಯ ಮುಸಗುಪ್ಪಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಕಣ್ಣು ಹಾಯಿಸಿದಲ್ಲೆಲ್ಲ ಗ್ರಾಮದ ತುಂಬೆಲ್ಲ ಜಲರಾಶಿಯೇ ಕಂಡುಬರುತ್ತಿದೆ.

ಮನೆಗಳು, ಅಂಗಡಿಗಳು,ದೇವಾಲಯಗಳು, ಮಂದಿರ, ರಂಗಮಂದಿರ, ಬ್ಯಾಂಕಗಳು ಸಂಪೂರ್ಣ ಮುಳುಗಡೆಯಾಗಿವೆ. ಕೃಷಿ ಭೂಮಿಯಂತು ಹೇಳಹೆಸರಿಲ್ಲದಂತೆ ನೀರಿನಲ್ಲಿ ಮಾಯವಾಗಿದೆ.

ಮುಸುಗುಪ್ಪಿ ಗ್ರಾಮದಲ್ಲಿ ಘಟಪ್ರಭಾ ನದಿಯ ಪ್ರವಾಹ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಗ್ರಾಮಸ್ಥರು ಮನೆಗಳನ್ನು ತೊರೆದು ಕಾಳಜಿ ಕೇಂದ್ರಗಳಿಗೆ, ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳು ಹಣವನ್ನು ಬೇರೆ ಕಡೆ ಶಿಫ್ಟ್ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಪ್ರವಾಹ ಇದೇ ರೀತಿ ಮುಂದುವರಿದರೆ ಇಡೀ ಗ್ರಾಮದ ಸ್ಥಿತಿ ಅಯೋಮಯವಾಗಲಿದೆ.


Home add -Advt

Related Articles

Back to top button