ಶಿರಸಿಯಲ್ಲಿ 5 ಕೋಟಿ ರೂ ಮೌಲ್ಯದ ತಿಮಿಂಗಲ ವಾಂತಿ ವಶ; ಬೆಳಗಾವಿಯ ವ್ಯಕ್ತಿ ಬಂಧನ
ಪ್ರಗತಿವಾಹಿನಿ ಸುದ್ದಿ, ಶಿರಸಿ – ಶಿರಸಿ ಪೊಲೀಸರು 5 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ (ಅಂಬರ್ ಗ್ರೀಸ್ ) ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬೆಳಗಾವಿಯ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ದಿನಾಂಕ: 25-10-2021 ರಂದು ಯಲ್ಲಾಪುರ ಕಡೆಯಿಂದ MH -04 DB 3713 ನೊಂದಣಿ ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿ ಅಂಬರ ಗ್ರೀಸ್ (ತಿಮಿಂಗಿಲದ ವಾಂತಿ) ನಂತಿರುವ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಿಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ ರವಿ ಡಿ. ನಾಯ್ಕ, ಡಿ.ಎಸ್.ಪಿ. ಶಿರಸಿ ರವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ರಾಮಚಂದ್ರ ನಾಯಕ, ಸಿ.ಪಿ.ಐ. ಶಿರಸಿ, ಭೀಮಾಶಂಕರ ಸಿನ್ನೂರ ಸಂಗಣ್ಣ ಪಿ.ಎಸ್.ಐ. ಶಿರಸಿ ಎನ್.ಎಂ. ಠಾಣೆ, ಈರಯ್ಯ ಪಿ.ಎಸ್.ಐ. ಶಿರಸಿ ಗ್ರಾಮೀಣ ಠಾಣಿ ಹಾಗೂ ಸಿಬ್ಬಂದಿಯೊಂದಿಗೆ ಶಿರಸಿ ನಗರದ ಮರಾಠಿಕೊಪ್ಪದ ಹತ್ತಿರ ಕಾರ್ಯಾಚರಣೆ ನಡೆಸಲಾಯಿತು.
ಸಂತೋಷ ಬಾಲಚಂದ್ರ ಕಾಮತ (ಪ್ರಾಯ 43 ವರ್ಷ ಸಾ ಬೆಳಗಾವಿ) ಮತ್ತು ರಾಜೇಶ ಮಂಜುನಾಥ ನಾಯ್ಕ (ಪ್ರಾಯ 32 ವರ್ಷ ಸಾ|| ಶಿರಸಿ) ಇವರು ಸೇರಿಕೊಂಡು 05 ಕೆ.ಜಿ 50 ಗ್ರಾಂ ತೂಕದ ಅಂಬರ ಗ್ರೀಸ್ (ತಿಮಿಂಗಿಲ ವಾಂತಿ) ಯಂತಹ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ಕಿಮ್ಮತ್ತು 5,00,00,000/- (ಐದು ಕೋಟಿ) ರೂಪಾಯಿ ಇದ್ದು ಯಾವುದೇ ಪರವಾನಿಗೆ ಇಲ್ಲದೇ ಮೋಸದಿಂದ ಮಾರಾಟ ಮಾಡುವ ಉದ್ದೇಶದಿಂದ ಮಾರುತಿ ಸ್ವೀಪ್ ಕಾರ್ನೇನಲ್ಲಿ ಇಟ್ಟುಕೊಂಡು ಸಾಗಾಟ ಮಾಡುತ್ತಿರುವಾಗ ಸಿಕ್ಕಿದ್ದು, ಅದರಂತೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆಯಲ್ಲಿ (ಪ್ರಕರಣ ನಂ. 80/2021 ಕಲಂ: 2(32), 9, 51 ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಮತ್ತು 420 ಸಹಿತ 34 ಐ.ಪಿ.ಸಿ ನೇದರಂತೆ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಶಿವಪ್ರಕಾಶ ದೇವರಾಜು, ಐ.ಪಿ.ಎಸ್, ಪೊಲೀಸ ಅಧೀಕ್ಷಕರು ಉ.ಕ. ಕಾರವಾರ ಹಾಗೂ ಎಸ್. ಭದ್ರಿನಾಥ ಹೆಚ್ಚುವರಿ ಪೊಲೀಸ ಅಧೀಕ್ಷಕರ ಮಾರ್ಗದರ್ಶನದಲ್ಲಿ, ರವಿ ಡಿ. ನಾಯ್ಕ: ಡಿ.ಎಸ್.ಪಿ. ಶಿರಸಿ ರವರ ನೇತೃತ್ವದಲ್ಲಿ, ರಾಮಚಂದ್ರ ನಾಯಕ, ಸಿ.ಪಿ.ಐ, ಶಿರಸಿ, ಭೀಮಾಶಂಕರ ಸಿನ್ನೂರ ಸಂಗಣ್ಣ ಪಿ.ಎಸ್.ಐ. ಶಿರಸಿ ಎನ್.ಎಂ. ಠಾಣಿ, ಈರಯ್ಯ ಪಿ.ಎಸ್.ಐ. ಶಿರಸಿ ಗ್ರಾಮೀಣ ಠಾಣಿ, ಮಾಂತೇಶ ವಾಲ್ಮೀಕಿ ಪ್ರೋ.ಪಿ.ಎಸ್.ಐ. ಹಾಗೂ ಸಿಬ್ಬಂಧಿಯವರಾದ ರಾಮಯ್ಯ ಪೂಜಾರಿ, ಹನುಮಂತ ಮಾಕಾಪುರ, ಅಶೋಕ ನಾಯ್ಕ, ಚೇತನ ಹಲಗೇರಿ, ಗಣಪತಿ ನಾಯ್ಕ, ಚಾಲಕರಾದ ಪಾಂಡು ನಾಗೋಜಿ, ಮೋಹನ ನಾಯ್ಕ, ಕೃಷ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪತ್ರಕರ್ತರಿಗೆ ಕರ್ಚೀಫ್ ಕೊಟ್ಟು ಗ್ಲೀಸರೀನ್ ಚೆಕ್ ಮಾಡಿ ಎಂದ ಹೆಚ್.ಡಿ.ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ