Latest

ಅಸಹ್ಯ, ಇದಕ್ಕೇನಾ ನಾವು ಅಮೂಲ್ಯ ಮತ ಹಾಕೋದು?

ಅಸಹ್ಯ, ಇದಕ್ಕೇನಾ ನಾವು ಅಮೂಲ್ಯ ಮತ ಹಾಕೋದು?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಇಂದಿನ ವಿಧಾನಸಭೆಯ ಕಾರ್ಯಕಲಾಪ ನೋಡಿದವರು ಛೀ ಥೂ ಎಂದು ಉಗಿಯದವರಿಲ್ಲ.

ಇಡೀ ನಾಡಿನ ಜನ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿರುವುದನ್ನು ನೋಡಿದರೆ ಎಂತವರಾದರೂ ಈ ಖುರ್ಚಿಯೇ ಬೇಡ ಎಂದು ಶರಣಾಗುತ್ತಿದ್ದರು. ಜನ ಇಂತಹ ನಾಟಕ ನೋಡುವುದಕ್ಕಾಗಿಯೇ ನಾವು ಮತ ಹಾಕಿದ್ದೇವಾ ಎಂದು ಮಮ್ಮಲ ಮರುಗುವಂತಾಗಿದೆ.

ಸ್ವತಃ ಸ್ಪೀಕರ್ ರಮೇಶ ಕುಮಾರ ಅವರೇ ಆರೂವರೆ ಕೋಟಿ ಜನರ ಭಯವಿಲ್ಲದವರು ಈ ರೀತಿ ವರ್ತಿಸುತ್ತಾರೆ ಎಂದರು. ಎಂತೆಂತಹ ಶಬ್ಧಗಳನ್ನು ಬಳಸಬಾರದಿತ್ತೋ ಅವನ್ನೆಲ್ಲ ಬಳಸಿ ಹೇಳಿದರು.

ಆದರೆ ಯಾವುದಕ್ಕೂ ಅಲ್ಲಿ ಬೆಲೆ ಇರಲಿಲ್ಲ. ಖುರ್ಚಿ ವ್ಯಾಮೋಹ ಎಂತಹ ಲಜ್ಜೆಗೇಡಿತನಕ್ಕೆ ಒಯ್ದಿತ್ತು ಎನ್ನುವುದಕ್ಕೆ ಈ ಸದನ ಸಾಕ್ಷಿಯಾಗಿದೆ.

ತಮ್ಮ ಶಾಸಕರದ್ದೇ ಬೆಂಬಲವಿಲ್ಲದ ಮೇಲೂ ಅಧಿಕಾರ ಬಿಡಲೊಪ್ಪದ ರೀತಿ ನಾಚಿಕೆಗೇಡಲ್ಲದೆ ಮತ್ತೇನು?

ಇಂತಹ ಅಧಿಕಾರ ಉಳಿಸಿಕೊಂಡು ಮಾಡುವುದಾದರೂ ಏನು ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇಷ್ಟು ಕೆಳಮಟ್ಟಕ್ಕೆ ಯಾವತ್ತೂ ಹೋಗಿರಲಿಕ್ಕಿಲ್ಲ. ಇದೊಂದು ಕಪ್ಪುಚುಕ್ಕೆಯೇ ಸರಿ.

ಸದನದಲ್ಲಿರುವ ಹಿರಿಯ ಸದಸ್ಯರೂ ಬುದ್ದಿಹೇಳದಿರುವುದು ಸೋಜಿಗವೇ ಸರಿ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button