ಭಾರತದ ಗೂಡಾಚಾರಿ ತನಿಖಾ ಸಂಸ್ಥೆಗಳು ಯಾವವು ? ಹುದ್ದೆಗಳಿಗೆ ನೇಮಕಾತಿ ಹೇಗೆ ? ಯಾರು ಅರ್ಹರು ? ಇಲ್ಲಿದೆ ಪೂರ್ಣ ವಿವರ; ಭಾಗ -3
ಭಾಗ -3 – ಎನ್‌ಐಎ (ನ್ಯಾಷನಲ್ ಇನ್ವೆಸ್ಟಿಗೇಟಿವ್ ಏಜೆನ್ಸಿ)
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ –
ಜೇಮ್ಸ್ ಬಾಂಡ್ ಸರಣಿ ಸಿನೇಮಾಗಳಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಏಕ್ ಥಾ ಟೈಗರ್, ಬೇಬಿ ಮೊದಲಾದ ಚಲನಚಿತ್ರಗಳು ಪತ್ತೆದಾರಿ ತನಿಖಾ ಸಂಸ್ಥೆಗಳು, ಪತ್ತೆದಾರರ ಜೀವ ಶೈಲಿ, ಕಾರ್ಯಾಚರಣೆಯನ್ನು ಸಾಧ್ಯಂತವಾಗಿ ತೆರೆದಿಟ್ಟಿದೆ. ಯಾವುದೇ ವ್ಯಕ್ತಿಯಾದರೂ ತನ್ನ ಬದುಕಿನಲ್ಲಿ ಒಮ್ಮೆಯಾದರೂ ಪತ್ತೆದಾರನಾಗಬೇಕೆಂಬ ಕನಸು ಕಾಣದೆ ಇರಲಾರ.
ಭಾರತದಲ್ಲಿ ದೇಶದ ಆಂತರಿಕವಾಗಿ ಮತ್ತು ವಿದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಅನೇಕ ಪತ್ತೆದಾರಿ ತನಿಖಾ ಸಂಸ್ಥೆಗಳಿವೆ. ಬೇರೆ ಬೇರೆ ತನಿಖಾ ಸಂಸ್ಥೆಗಳ ಕಾರ್ಯವ್ಯಾಪ್ತಿ, ಕಾರ್ಯ ವಿಧಾನ ವಿಭಿನ್ನವಾಗಿರುತ್ತವೆ.
ಭಾರತದಲ್ಲಿ ಸಿಬಿಐ (ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್) ಐಬಿ (ಇಂಟಲಿಜೆನ್ಸ್ ಬ್ಯೂರೊ), ರಾ (ರೀಸರ್ಚ್ ಎಂಡ್ ಅನಾಲಿಸಿಸ್ ವಿಂಗ್), ಎನ್‌ಐಎ (ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ) ಪ್ರಮುಖವಾಗಿವೆ.
ಈ ಪೈಕಿ ರಾ ವಿದೇಶಗಳಲ್ಲಿ ಗೂಡಾಚಾರಿಕೆ ಕಾಯಾಚರಣೆ ನಡೆಸುತ್ತಿದ್ದರೆ, ಐಬಿ ದೇಶದ ಒಳಗೆ ಮತ್ತು ವಿದೇಶಗಳೆರಡರಲ್ಲೂ ಕಾರ್ಯಚರಣೆ ನಡೆಸುತ್ತದೆ. ಸಿಬಿಐ ದೇಶದ ಎಲ್ಲ ಆಂತರಿಕ ಅಪರಾಧಿಕ ಚಟುವಟಿಕೆಗಳ ತನಿಖೆ ಕೈಗೊಳ್ಳುವ ಅಧಿಕಾರ ಹೊಂದಿದ್ದರೆ ಎನ್‌ಐಎ ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ.
ಎನ್‌ಐಎ (ನ್ಯಾಷನಲ್ ಇನ್ವೆಸ್ಟಿಗೇಟಿವ್ ಏಜೆನ್ಸಿ)
ಎನ್‌ಐಎ ವಿಶೇಷವಾಗಿ ಉಗ್ರವಾದಿಗಳ ವಿರುದ್ಧದ ಕಾರ್ಯಾಚರಣೆಗಾಗಿ ಸ್ಥಾಪಿಸಲಾದ ವಿಶೇಷ ತನಿಖಾ ಸಂಸ್ಥೆಯಾಗಿದೆ. ದೇಶದ ಆಂತರಿಕವಾಗಿ, ಕೆಲವೊಮ್ಮೆ ವಿದೇಶಗಳಲ್ಲೂ ಸಹ, ಭಾರತದಲ್ಲಿ ಉಗ್ರವಾದ ಚಟುವಟಿಕೆ ನಡೆಸುವವರ ವಿರುದ್ಧ ತನಿಖೆ ಕೈಗೊಂಡು, ಉಗ್ರವಾದ ಹತ್ತಿಕ್ಕುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ೨೦೦೮ರಲ್ಲಿ ಎನ್‌ಐಎ ಅಸ್ಥಿತ್ವಕ್ಕೆ ಬಂದಿದೆ.
ವಾರ್ಷಿಕ ಬಜೆಟ್: ೧೮೨ ಕೋಟಿ ರೂ.
ಸಂಸ್ಥಾಪಕರು: ರಾಧಾ ವಿನೋದ್ ರಾಜು (ಕೇಂದ್ರ ಸರಕಾರ)
ಕಾರ್ಯಾಚರಣೆ ವ್ಯಾಪ್ತಿ: ಭಾರತ ದೇಶದ ವ್ಯಪ್ತಿ
ಒಟ್ಟು ಸಿಬ್ಬಂದಿ: ೬೪೯
ಹಾಲಿ ಮುಖ್ಯಸ್ಥ: ಯೋಗೇಶ್ ಚಂದ್ರ ಮೋದಿ
ಮಾತೃ ಇಲಾಖೆ: ಕೇಂದ್ರ ಗೃಹ ಇಲಾಖೆ
ವೇತನ: ೯.೬೦ ಲಕ್ಷ- ೧೫.೬೦ ಲಕ್ಷ ರೂ. (ವಾರ್ಷಿಕ)
ನೇಮಕಾತಿ ಹೇಗೆ : ಎನ್‌ಐಎ ಗೆ ನೇಮಕಾತಿ ಹೊಂದಲು ಕಂಬೈನ್ಡ್ ಗ್ರಾಜ್ಯುವೇಟ್ ಲೆವಲ್ ಪರೀಕೆ ಉತ್ತೀರ್ಣರಾಗಬೇಕು. ಇದು ೪ ಹಂತದಲ್ಲಿ ನಡೆಯುವ ಪರೀಕ್ಷೆಯಾಗಿದ್ದು ಎಲ್ಲ ಹಂತದಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದವರಿಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತದೆ. ಇದರಲ್ಲೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದವರನ್ನು ಕೊನೆಯಲ್ಲಿ ಸಂದರ್ಶನದ ಮೂಲಕ ಎನ್‌ಐಎ ಅಧಿಕಾರಿಗಳ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ