Latest

ರಾಹುಲ್ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರ ಬಗ್ಗೆ ದಿಗ್ವಿಜಯ ಸಿಂಗ್ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಟೀಕಿಸಿದ್ದಾರೆ.

ಪ್ರಕರಣದ ತೀರ್ಪಿನ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ ದಿಗ್ವಿಜಯ ಸಿಂಗ್ “ನ್ಯಾಯಾಧೀಶರು ಒಮ್ಮೆ ಗೃಹ ಸಚಿವ ಅಮಿತ್ ಶಾ ಅವರ ವಕೀಲರಾಗಿದ್ದರು ಎಂಬ ವಿಷಯವನ್ನು ಕೇಳಿದ್ದೇನೆ” ಎಂದು ಹೇಳಿದ್ದಾರೆ.

“ರಾಹುಲ್ ಗಾಂಧಿ ಅವರ ವಿಷಯದಲ್ಲಿ ಈ ತೀರ್ಪನ್ನು ನಾವು ನಿರೀಕ್ಷಿಸಿರಲಿಲ್ಲ” ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.

‘ಮೋದಿ ಉಪನಾಮ’ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯದಿಂದ 2 ವರ್ಷ ಶಿಕ್ಷೆಗೆ ಗುರಿಯಾದ ನಂತರ ತಮ್ಮ ಲೋಕಸಭಾ ಸದಸ್ಯತ್ವದಿಂದ ವಜಾಗೊಂಡಿದ್ದ ರಾಹುಲ್ ತಮ್ಮ ವಿರುದ್ಧದ ದೋಷಾರೋಪಕ್ಕೆ ತಡೆ ಕೋರಿ ಮಾಡಿದ ಮನವಿಯನ್ನು ಸೂರತ್ ನ್ಯಾಯಾಲಯ ಗುರುವಾರವಷ್ಟೇ ವಜಾಗೊಳಿಸಿದೆ.

ಈ ಬೆಳವಣಿಗೆಯ ನಂತರ ದಿಗ್ವಿಜಯ ಸಿಂಗ್ ತಮ್ಮ ಅಸಮಾಧಾನ ಪ್ರಕಟಿಸಿದ್ದಾರೆ.

https://pragati.taskdun.com/bjp-leaderscongress-joind-k-shivakumar/

https://pragati.taskdun.com/d-k-shivakumarpressmeetbjpvidhanasabha-election/
https://pragati.taskdun.com/pm-narendra-modicallk-s-eshwarappa/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button