ನಾಗರ ಪೂಜೆಗೆ ಶುಭ ಸಮಯ ಯಾವುದು?
ಆಗಸ್ಟ್ 5ರಂದು ಈ ಬಾರಿ ನಾಗರಪಂಚಮಿ ಹಬ್ಬ ಬಂದಿದೆ. ಶ್ರಾವಣ ಮಾಸದ ಸೋಮವಾರ ನಾಗರಪಂಚಮಿ ಹಬ್ಬ ಬಂದಿರುವುದು ವಿಶೇಷ. 20 ವರ್ಷಗಳ ನಂತ್ರ ಈ ಯೋಗ ಬಂದಿದೆ. ನಾಗದೇವ ಶಿವನ ಆಭರಣ. ಸೋಮವಾರ ಶಿವನ ಪ್ರಿಯವಾದ ದಿನ. ಈ ವರ್ಷದ ನಂತ್ರ ಇನ್ನು ಸೋಮವಾರ ನಾಗರಪಂಚಮಿ ಆಗಸ್ಟ್ 21, 2023 ರಲ್ಲಿ ಬರಲಿದೆ.
ಜ್ಯೋತಿಷ್ಯಗಳು ನಾಗರಪಂಚಮಿ ಹಾಗೂ ಶ್ರಾವಣ ಸೋಮವಾರ ಒಂದೇ ದಿನ ಬಂದಿರುವುದ್ರಿಂದ ಅದನ್ನು ಸಂಜೀವಿನ ಮಹಾಯೋಗವೆಂದು ಕರೆದಿದ್ದಾರೆ. ಇದಕ್ಕೂ ಮುನ್ನ ಈ ಮಹಾಯೋಗ ಆಗಸ್ಟ್ 16, 1993 ರಲ್ಲಿ ಬಂದಿತ್ತು. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನದಂದು ನಾಗರಪಂಚಮಿ ಆಚರಿಸಲಾಗುತ್ತದೆ.
ಪಂಚಮಿ ತಿಥಿ ಈ ಬಾರಿ ಆಗಸ್ಟ್ 4 ರ ಸಂಜೆ 6.48 ರಿಂದ ಶುರುವಾಗಲಿದ್ದು, ಆಗಸ್ಟ್ 5 ರ ಮಧ್ಯಾಹ್ನ 2.52 ರವರೆಗೆ ಇರಲಿದೆ. ನಾಗ ಪೂಜೆಗೆ ಆಗಸ್ಟ್ 5 ರ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆ 37 ನಿಮಿಷದವರೆಗೆ ಶುಭ ಮುಹೂರ್ತವಿದೆ. ನಂತ್ರ ಬೆಳಿಗ್ಗೆ 9 ಗಂಟೆ 15 ನಿಮಿಷದಿಂದ 10 ಗಂಟೆ 53 ನಿಮಿಷದವರೆಗಿರಲಿದೆ.
-ಅರುಣ ಹೆಗಡೆ, ಖ್ಯಾತ ಜ್ಯೋತಿಷಿ
ಇದನ್ನೂ ಓದಿ –
ನಾಗರ ಪಂಚಮಿ ಹಬ್ಬ ಆಚರಣೆ ಬಂದಿದ್ದು ಹೇಗೆ ಗೊತ್ತೆ?
ದಿನ ಭವಿಷ್ಯ: ಪ್ರತಿ ದಿನ ಸಂಕ್ಷಿಪ್ತ ಭವಿಷ್ಯ; ಹೇಗಿದೆ ನಿಮಗೆ ಈ ದಿನ( 04 ಆಗಸ್ಟ್ 2019)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ