Kannada NewsKarnataka NewsNationalPolitics

*2025 ರಲ್ಲಿ ಪ್ರಧಾನಮಂತ್ರಿ ಅವರ ವಿದೇಶಕ್ಕೆ ತಗುಲಿದ ಒಟ್ಟು ವೆಚ್ಚ ಎಷ್ಟು ಗೋತ್ತಾ..?*

ಪ್ರಗತಿವಾಹಿನಿ ಸುದ್ದಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025ರಲ್ಲಿ ವಿವಿಧ ದೇಶಗಳ ಪ್ರವಾಸ ನಡೆಸಿದ ವೇಳೆ ಖರ್ಚಾಗಿರುವ ವೆಚ್ಚ ಎಷ್ಟು ಎಂಬುವುದು ಇದೀಗ ಬಹಿರಂಗವಾಗಿದೆ.

2025 ರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ ಮತ್ತು ಜಪಾನ್ ಸೇರಿದಂತೆ 23 ದೇಶಗಳಿಗೆ ಕೈಗೊಂಡ ಪ್ರವಾಸಗಳಿಗೆ 180 ಕೋಟಿ ರೂ. ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Home add -Advt

ರಾಜ್ಯಸಭಾ ಸಂಸದರಾದ ಸಂಜಯ್ ಸಿಂಗ್ ಮತ್ತು ಡಾ. ವಿ. ಶಿವದಾಸನ್ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರೆಟಾ ಅವರು ಲಿಖಿತ ಉತ್ತರ ನೀಡಿದ್ದಾರೆ.

2025 ರಲ್ಲಿ ಮೋದಿ ಅವರ ವಿವಿಧ ದೇಶಗಳ ಪ್ರವಾಸಗಳಿಗೆ ಸುಮಾರು 187 ಕೋಟಿ ವೆಚ್ಚವಾಗಿದೆ. ಕಳೆದ ವರ್ಷದ ಪ್ರತ್ಯೇಕ ಪ್ರವಾಸಗಳ ವೆಚ್ಚದಲ್ಲಿ ಫ್ರಾನ್ಸ್ (25,59,82,902 ರೂ.), ಅಮೆರಿಕ (16,54,84,302 ರೂ.), ಸೌದಿ ಅರೇಬಿಯಾ (15,54,03,792.47 ರೂ.), ಬ್ರೆಜಿಲ್ (17,72,22,144 ರೂ.), ಚೀನಾ (10,59,90,561 ರೂ.) ಮತ್ತು ಬ್ರಿಟನ್ (9,91,55,061.39 ರೂ.) ಪ್ರಮುಖವಾಗಿವೆ.

2025 ರಲ್ಲಿ ಮೋದಿ ಅವರು ಮಾರಿಷಸ್, ಥೈಲ್ಯಾಂಡ್, ಶ್ರೀಲಂಕಾ, ಸೈಪ್ರಸ್, ಕೆನಡಾ, ಕ್ರೊಯೇಷಿಯಾ, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ನಮೀಬಿಯಾ, ಮಾಲ್ಡೀವ್ಸ್, ಜಪಾನ್, ಭೂತಾನ್, ದಕ್ಷಿಣ ಆಫ್ರಿಕಾ, ಜೋರ್ಡಾನ್, ಒಮಾನ್ ಮತ್ತು ಇಥಿಯೋಪಿಯಾಗೆ ಭೇಟಿ ನೀಡಿದ್ದರು.

ಯಾವ ವರ್ಷ ಎಷ್ಟು?

2024 – 109 ಕೋಟಿ ರೂ.

2023 – 93 ಕೋಟಿ ರೂ.

2022 – 55.82 ಕೋಟಿ ರೂ.

2021 – 36 ಕೋಟಿ ರೂ

ಮನಮೋಹನ್‌ ಸಿಂಗ್‌ ಪ್ರವಾಸ

2011 – ಅಮೆರಿಕ ಪ್ರವಾಸ: 10.74 ಕೋಟಿ ರೂ.
2013 – ರಷ್ಯಾ ಪ್ರವಾಸ: 9.96 ಕೋಟಿ ರೂ.
2011 – ಫ್ರಾನ್ಸ್ ಪ್ರವಾಸ: 8.33 ಕೋಟಿ ರೂ.
2013 – ಜರ್ಮನಿ ಪ್ರವಾಸ: 6.02 ಕೋಟಿ ರೂ.

ಈ ಹಿಂದಿನ ಒಂದೊಂದು ಪ್ರವಾಸದ ವೆಚ್ಚವು ಪ್ರಸಕ್ತ ವರ್ಷದಲ್ಲಿ ಪ್ರಧಾನಿ ಮೋದಿ ಅವರ ಸಂಪೂರ್ಣ ವಿದೇಶಿ ಪ್ರವಾಸಗಳಿಗೆ ತಗುಲಿದ ಒಟ್ಟು ವೆಚ್ಚಕ್ಕಿಂತ ಹೆಚ್ಚಾಗಿತ್ತು ಎಂದು ಸಚಿವಾಲಯ ತಿಳಿಸಿದ್ದು, ಈ ಅಂಕಿ-ಅಂಶಗಳನ್ನು ಹಣದುಬ್ಬರ ಅಥವಾ ದರ ವ್ಯತ್ಯಾಸಕ್ಕೆ ಸರಿಹೊಂದಿಸದೆ ನೇರ ನಿವ್ವಳ ವೆಚ್ಚದ ಆಧಾರದಲ್ಲಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

Related Articles

Back to top button