Kannada NewsKarnataka News

ಜನರ ಸಂಕಷ್ಟಕ್ಕೆ ಸ್ಪಂದಿಸದವರು ಈಗ ಯಾತ್ರೆ ಮಾಡಿದರೆ ಏನು ಪ್ರಯೋಜನ? – ಡಾ.ಸೋನಾಲಿ ಸರ್ನೋಬತ್ ಪ್ರಶ್ನೆ  

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಅಧಿಕಾರವಿದ್ದಾಗ ಖಾನಾಪುರದ ಜನರಿಗಾಗಿ ಏನನ್ನೂ ಮಾಡದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಯಾತ್ರೆಯ ನೆಪ ಮಾಡಿಕೊಂಡು ಜನರ ಬಳಿ ಬರುತ್ತಿವೆ ಎಂದು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಖಾನಾಪುರ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡದ ಕಾಂಗ್ರೆಸ್ ಶಾಸಕರು ಹಾಥ್ ಸೇ ಹಾಥ್ ಜೋಡೋ ಎನ್ನುತ್ತ ಮನೆ ಮನೆಗೆ ಕಾಂಗ್ರೆಸ್ ಎಂದು ಅಭಿಯಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಎಷ್ಟೇ ದೂರ ಭಾರತ್ ಜೋಡೋ ಪಾದಯಾತ್ರೆ ಮಾಡಿದರೂ ಬೆಳೆದಿದ್ದು ರಾಹುಲ್ ಗಾಂಧಿಯವರ ಗಡ್ಡ ಮಾತ್ರವೇ ಹೊರೆತು ಬೇರೆ ಏನೂ ಪ್ರಯೋಜನ ಆಗಿಲ್ಲ. ಅಂತದ್ದರಲ್ಲಿ ಈಗ ಇಲ್ಲಿ ಯಾತ್ರೆ ಮಾಡಿದರೆ ಆಗುವುದೇನಿದೆ? ಜನರ ಸಂಕಷ್ಟಕ್ಕೆ ಸ್ಪಂದಿಸದವರು ಯಾವ ಯಾತ್ರೆ ಮಾಡಿದರೇನು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನವರು ತಮ್ಮ ಚಿಹ್ನೆಯಲ್ಲಿರುವ ಹಸ್ತದ ರೇಖೆಗಳನ್ನು ಬದಲಾಯಿಸಿದ್ದಾರೆ. ಇವರ ಹಣಬರಹವೇ ಸರಿ ಇಲ್ಲ. ಅಂದಾಗ ಹಸ್ತದ ರೇಖೆ ಬದಲಿಸಿ ಏನು ಪ್ರಯೋಜನ? ಇದನ್ನೆಲ್ಲ ಬಿಟ್ಟು ಜನರ ಕೆಲಸ ಮಾಡಿದ್ದರೆ ಇವರ ಹಣೆಬರಹ ಸ್ವಲ್ಪವಾದರೂ ಬದಲಾಗುತ್ತಿತ್ತೇನೋ ಎಂದು ಅವರು ವ್ಯಂಗ್ಯವಾಡಿದ್ದಾರೆ.

 ಖಾನಾಪುರ ಶಾಸಕರು ಎಷ್ಟು ಕೆಲಸ ಮಾಡಿದ್ದಾರೆ ಎಂದು ಜನರು ನೋಡಿದ್ದಾರೆ. ಕೋವಿಡ್ 19 ಮತ್ತು ಲೋಂಡಾ ಗ್ರಾಮದಲ್ಲಿ ಮಳೆಯಿಂದ ಜನರು ಸಂಕಷ್ಟಕ್ಕೀಡಾದಾಗ ಜನರಿಗೆ ಯಾರು ಸಹಾಯ ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರೇ ಇದಕ್ಕೆಲ್ಲ ಉತ್ತರಿಸುತ್ತಾರೆ. ಕೇವಲ ತೋರಿಕೆಗೆ ಕೆಲಸ ಮಾಡುವುದಕ್ಕೂ, ನಿಜವಾಗಿ ಜನರ ಕಷ್ಟಕ್ಕೆ ಸ್ಪಂದಿಸುವುದಕ್ಕೂ ವ್ಯತ್ಯಸವಿದೆ. ಕಷ್ಟ ಕಾಲದಲ್ಲಿ ಜನರ ಹತ್ತಿರ ಬಾರದ ಶಾಸಕರನ್ನು ಜನರೇ ಈ ಬಾರಿ ದೂರ ಮಾಡುತ್ತಾರೆ ಎಂದು ಸೋನಾಲಿ ಸರ್ನೋಬತ್ ಹೇಳಿದ್ದಾರೆ.
 ಜೆಡಿಎಸ್ ನವರು ಈಗ ಲಿಂಗನಮಠ ಗ್ರಾಮದಿಂದ ಪಂಚರತ್ನ ಯಾತ್ರೆ ಪ್ರಾರಂಭಿಸಿದ್ದಾರೆ. ಖಾನಾಪುರ ತಾಲೂಕಿನ ಜನರ ಯಾವುದೇ ಕಷ್ಟಕ್ಕೆ ಸ್ಪಂದಿಸದ ಜೆಡಿಎಸ್ ಮುಖಂಡರು ಜನರ ಮಧ್ಯೆ ಜಾತಿಯ ವಿಷ ಬೀಜ ಭಿತ್ತುತ್ತಿದ್ದಾರೆ. ಬ್ರಾಹ್ಮಣರು, ಲಿಂಗಾಯತರು ಹಾಗೂ ಜಾತಿಗಳ ನಡುವೆ ಬೆಂಕಿ ಹಚ್ಚದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲವೇನೋ. ಆದರೆ ಜನರು ಇದನ್ನೆಲ್ಲ ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ ಎಂದು ಸೋನಾಲಿ ಸರ್ನೋಬತ್ ಟಾಂಗ್ ನೀಡಿದರು.
ಎಚ್. ಡಿ.ಕುಮಾರಸ್ವಾಮಿ  ಮುಖ್ಯಮಂತ್ರಿಯಾಗಿದ್ದಾಗ ಮಹದಾಯಿ ಸಮಸ್ಯೆ ಪರಿಹರಿಸಲು ಯಳ್ಳಷ್ಟೂ ಪ್ರಯತ್ನಿಸಲಿಲ್ಲ. ಈಗ ಬಿಜೆಪಿ ಗೋವಾ ಮತ್ತು ಕರ್ನಾಟಕ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹರಿಸಿದೆ. ಬರೇ ಟೀಕೆ ಮಾಡುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಿದಾಗ ಮಾತ್ರ ಮತ ಕೇಳುವ ನೈತಿಕತೆ ಇರುತ್ತದೆ. ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಅರ್ಥ ಮಾಡಿಕೊಳ್ಳಲಿ ಎಂದು ಸರ್ನೋಬತ್ ಕಿವಿಮಾತು ಹೇಳಿದ್ದಾರೆ.
https://pragati.taskdun.com/amith-shahputturuhanumagiripanchamukhi-anjaneya-templebharatamata-mandira/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button