
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
16 ಶಾಸಕರು ರಾಜಿನಾಮೆ ನೀಡಿ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಮೂಡಿಸಿದ್ದಾರೆ.
ಯಾವಾಗ ಮೊದಲ ಹಂತದಲ್ಲಿ ಶಾಸಕರು ರಾಜಿನಾಮೆ ನೀಡಿದರೋ ಅಂದಿನಿಂದಲೇ ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ್ ಹೆಸರೂ ಜೋರಾಗಿ ಕೇಳತೊಡಗಿತು.
ಕಳೆದ 8 ದಿನದಿಂದಲೂ ಅಂಜಲಿ ನಿಂಬಾಳಕರ್ ಇಂದು ರಾಜಿನಾಮೆ ನೀಡುತ್ತಾರೆ, ನಾಳೆ ನೀಡುತ್ತಾರೆ ಎನ್ನುವ ಸುದ್ದಿ ಬರುತ್ತಲೇ ಇತ್ತು.
ಅಂಜಲಿ ನಿಂಬಾಳಕರ್ ಮಾತ್ರ ಎಲ್ಲೂ ಕಾಣಿಸಿಕೊಳ್ಳಲೂ ಇಲ್ಲ, ಸ್ಪಷ್ಟೀಕರಣ ನೀಡಲೂ ಇಲ್ಲ. ಇದರಿಂದ ವದಂತಿ ಇನ್ನಷ್ಟು ಜೋರಾಯಿತು.
ಇಂದು ಹಾಜರ್:
ಅಂಜಲಿ ನಿಂಬಾಳಕರ್ ಇಂದು ವಿಧಾನಸೌಧಕ್ಕೆ ಆಗಮಿಸಿ ಅಧಿವೇಶನದಲ್ಲಿ ಪಾಲ್ಗೊಂಡರು. ನಾನು ರಾಜಿನಾಮೆ ನೀಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಬಿಜೆಪಿಯ ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಪ್ರಗತಿವಾಹಿನಿ ಮಾಹಿತಿ ಪ್ರಕಾರ ಅಂಜಲಿ ಗಂಟಲು ನೋವು ಮತ್ತು ಜ್ವರದಿಂದಾಗಿ ಹಾಸಿಗೆ ಹಿಡಿದಿದ್ದರು. ಸಂಪೂರ್ಣ ವಿಶ್ರಾಂತಿಯಲ್ಲಿದ್ದರು.
ಮಾಧ್ಯಮಗಳಲ್ಲಿ ಅವರ ಹೆಸರು ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಅವರನ್ನು ಸಂಪರ್ಕಿಸಿದ್ದಾರೆ. ಅವರಿಗೆ ಅಂಜಲಿ ಮನವರಿಕೆ ಮಾಡಿದ್ದಾರೆ.
ಹಾಗಾಗಿ ಅವರ ಬಗ್ಗೆ ಕಾಂಗ್ರೆಸ್ ನಾಯಕರು ನಿರಾಳರಾಗಿದ್ದರೆನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ