Karnataka News

ಈಶ್ವರಪ್ಪ ಮಗಳ ಮೊಬೈಲ್ ಪತ್ತೆಯಾಗಿದ್ದು ಎಲ್ಲಿ? -ಶಾಕ್ ಆಗ್ತೀರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಗಳ ಮೊಬೈಲ್ ನಾಪತ್ತೆಯಾಗಿತ್ತು.  ಬೆಂಗಳೂರಿನ ಅವರ ಮನೆಯಿಂದಲೇ ಮೊಬೈಲ್ ನಾಪತ್ತೆಯಾಗಿದ್ದು, ಅವರು ಪೊಲೀಸ್ ದೂರು ದಾಖಲಿಸಿದ್ದರು.

ಸೆಪ್ಟಂಬರ್ 13ರಂದು ದಾಖಲಾಗಿದ್ದ ದೂರನ್ನು ಬೆನ್ನತ್ತಿದ ಪೊಲೀಸರು ಮೊಬೈಲ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬಂಟನೂರು ಗ್ರಾಮದಲ್ಲಿ ಮೊಬೈಲ್ ಪತ್ತೆಯಾಗಿದೆ. ಗ್ರಾಮದ ಲಕ್ಷ್ಮಣ ಬಂಡಿವಡ್ಡರ್ ಎನ್ನುವವರ ಮನೆಯಲ್ಲಿ ಪೊಲೀಸರು ಮೊಬೈಲ್ ಪತ್ತೆ ಮಾಡಿ ಬೆಂಗಳೂರಿಗೆ ಒಯ್ದಿದ್ದಾರೆ.

ಲಕ್ಷ್ಮಣ ಬಂಡಿವಡ್ಡರ್ ಬಿಜೆಪಿ ಕಾರ್ಯಕರ್ತ. ಆದರೆ ಅವರ ಮನೆಯಲ್ಲಿ ಮೊಬೈಲ್ ಪತ್ತೆಯಾಗಿದ್ದು ಹೇಗೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಲಕ್ಷ್ಮಣ ಈಶ್ವರಪ್ಪ ಭೇಟಿಗೆ ಬೆಂಗಳೂರಿನ ಅವರ ಮನೆಗೆ ತೆರಳಿದ್ದರೇ ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಆದರೆ ವಿಷಯ ತಿಳಿದು ಸ್ವತಃ ಈಶ್ವರಪ್ಪ ಸಹ ಶಾಕ್ ಆಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯುತ್ತದೆಯೋ, ನಿಲ್ಲಿಸಲು ಪೊಲೀಸರಿಗೆ ಸೂಚನೆ ರವಾನಯಾಗುತ್ತದೆಯೋ ಕಾದು ನೋಡಬೇಕಿದೆ.

Home add -Advt

14 ತಿಂಗಳ ಸಾಧನೆ ಪುಸ್ತಕ ಮಾಡಿ ಹಂಚುತ್ತೇನೆ -ಕುಮಾರಸ್ವಾಮಿ

ಒಟ್ಟಿಗೇ ಇಹಲೋಕ ತ್ಯಜಿಸಿದ ನಿವೃತ್ತ ಶಿಕ್ಷಕ ದಂಪತಿ

Related Articles

Back to top button