Kannada NewsKarnataka NewsLatest

ಯಾರೀಕೆ, ಬೆತ್ತಲೆಯಾಗಿ ಬೈಕ್ ಓಡಿಸಿಕೊಂಡು ಹೋದಾಕೆ?

ಯಾರೀಕೆ, ಬೆತ್ತಲೆಯಾಗಿ ಬೈಕ್ ಓಡಿಸಿಕೊಂಡು ಹೋದಾಕೆ?

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಮಂಗಳವಾರ ರಾತ್ರಿ ಬೆಳಗಾವಿಯಲ್ಲೊಂದು ವಿಚಿತ್ರ ಘಟನೆಗೆ ಹಲವರು ಸಾಕ್ಷಿಯಾದರು. ಇಲ್ಲಿಯ ಕಾಲೇಜು ರಸ್ತೆ, ಕ್ಲಬ್ ರಸ್ತೆಯಲ್ಲಿ ನಡೆದ ವಿದ್ಯಮಾನವಿದು. ರಾತ್ರಿ 10.20ರ ವೇಳೆಯಲ್ಲಿ ನಡೆದ, ಯಾರೂ ಊಹಿಸದ, ನಂಬಲು ಕಷ್ಟ ಸಾಧ್ಯವಾದ ಘಟನೆ ಇದು.

ಸುಮಾರು 20 ವರ್ಷ ಪ್ರಾಯದ ಯುವತಿಯೊಬ್ಬಳು ಬೆತ್ತಲೆಯಾಗಿ ಬೈಕ್ ಓಡಿಸಿಕೊಂಡು ಹೋಗಿದ್ದಾಳೆ. ಕಾಲೇಜು ರಸ್ತೆಯಿಂದ ಬಂದು, ಕ್ಲಬ್ ರಸ್ತೆ ಮೂಲಕ ಆಕೆ ವೇಗವಾಗಿ ಬೈಕ್ ಓಡಿಸಿಕೊಂಡು ಹೋಗಿದ್ದಾಳೆ. ರಸ್ತೆಯಲ್ಲಿ ಹೋಗುತ್ತಿದ್ದವರು, ಅಕ್ಕಪಕ್ಕ ನಿಂತವರೆಲ್ಲ ನೋಡ ನೋಡುತ್ತಿದ್ದಂತೆ ಆಕೆ ಮಾಯವಾಗಿದ್ದಾಳೆ.

Home add -Advt

ಕನ್ನಡ ಸಂಘಟನೆಗಳ ಮುಖಂಡ ಅಶೋಕ ಚಂದರಗಿ, ತಾವು ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ್ದಾಗಿ ಹೇಳಿದ್ದಾರೆ. ರಾತ್ರಿ ತಾವು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತಮ್ಮ ಎದುರೇ ಯುವತಿ ವೇಗವಾಗಿ ಬೈಕ್ ಓಡಿಸಿಕೊಂಡು ಹೋದಳು. ನಾನು ನಿಧಾನವಾಗಿ ಬೈಕ್ ಓಡಿಸಿಕೊಂಡು ಹೋಗುತ್ತಿದ್ದೆ. ಆಕೆ ಸ್ಪೀಡ್ ಬ್ರೇಕರ್ ಇದ್ದಲ್ಲಿ ಕೂಡ ವೇಗ ಕಡಿಮೆ ಮಾಡದೆ ಬೈಕ್ ಓಡಿಸಿಕೊಂಡು ಹೋದಳು ಎನ್ನುತ್ತಾರೆ ಅವರು.

ಆಕೆ ಯಾವುದಾದರೂ ಅಮಲಿನಲ್ಲಿದ್ದಳೋ ಅಥವಾ ಯಾರ ಬಳಿಯಾದರೂ ಚಾಲೇಂಜ್ ಕಟ್ಟಿಕೊಂಡು ಬೆತ್ತಲೆಯಾಗಿ ಬೈಕ್ ಓಡಿಸಿಕೊಂಡು ಹೋದಳೋ ಎನ್ನುವುದು ಗೊತ್ತಾಗಲಿಲ್ಲ ಎಂದು ಚಂದರಗಿ ತಿಳಿಸಿದರು.

ಕಾಲೇಜು ರಸ್ತೆ ಮತ್ತು ಕ್ಲಬ್ ರಸ್ತೆಯ ಅಂಗಡಿಗಳಿಗಿರಬಹುದಾದ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದರೆ ಆಕೆ ಯಾರು ಎನ್ನುವುದು ಪತ್ತೆಯಾಗಬಹುದು. ಬೆಳಗಾವಿಯಲ್ಲಿ ಇಂತಹ ವಿದ್ಯಾಮಾನ ನಡೆದಿರುವುದು ಹಲವರಿಗೆ ಶಾಕ್ ನೀಡುವಂತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button