National

*ಮಹಾ ಮುಂದಿನ ಸಿಎಂ ಯಾರು..? ಪಡ್ನವಿಸ್ ಹೆಳಿದ್ದೇನು..?*

ಪ್ರಗತಿವಾಹಿನಿ ಸುದ್ದಿ: ಮುಂದಿನ ಸಿಎಂ ಯಾರು ಎಂಬುದು ನಮ್ಮಲ್ಲಿ ಇನ್ನೂ ನಿರ್ಧಾರವಾಗಿಲ್ಲ. ಆದರೆ ಮೂರೂ ಪಕ್ಷಗಳು ಒಗ್ಗಟ್ಟಿನಿಂದ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಒಕ್ಕೂಟದ ಗೆಲುವಿನ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯೆ ನೀಡಿದ್ದಾರೆ

ಸಿಎಂ ಸ್ಥಾನದ ಬಗ್ಗೆ ನಾವು ಚುನಾವಣೆಗೆ ಮುಂಚೆಯೇ ನಿರ್ಧಾರ ಮಾಡಿದ್ದೆವು. ಚುನಾವಣೆಯ ಬಳಿಕ ಮೂರೂ ಪಕ್ಷಗಳ ಒಮ್ಮತದ ನಿರ್ಣಯವನ್ನು ಅಂಗೀಕರಿಸಬೇಕೆಂದು ತೀರ್ಮಾನಿಸಿದ್ದೆವು. ಸಿಎಂ ಸ್ಥಾನದ ಬಗ್ಗೆ ನಮ್ಮಲ್ಲಿ ಈಗಲೂ ಯಾವುದೇ ವಿವಾದವಿಲ್ಲ ಎಂದು ಹೇಳಿದ್ದಾರೆ.

ನಾವು ಮೂರೂ ಪಕ್ಷಗಳ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲಾ ಕಾರ್ಯಕರ್ತರೂ, ಜನರೂ ಬದ್ಧವಾಗಿರಲಿದ್ದಾರೆ. ನಾನು ಆಧುನಿಕ ಅಭಿಮನ್ಯು ಎಂದು ಮೊದಲೇ ಹೇಳಿದ್ದೆ. ಚಕ್ರವ್ಯೂಹವನ್ನು ಹೇಗೆ ಬೇಧಿಸಬೇಕೆಂದು ನನಗೆ ಗೊತ್ತು. ಈ ದಿಗ್ವಿಜಯದಲ್ಲಿ ನನ್ನ ಪಾಲು ತೀರಾ ಕಡಿಮೆ. ಇದೊಂದು ಸಮೂಹ ಸಂಘಟನೆಯ ಪ್ರಯತ್ನ ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button