Latest

ಆತಂಕ ಹೆಚ್ಚಿಸಿದ WHO ಹೇಳಿಕೆ

ಪ್ರಗತಿವಾಹಿನಿ ಸುದ್ದಿ; ಜಿನೀವಾ: ವಿಶ್ವಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿರುವ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯೂ ಹೆಚ್ ಒ ಕೊವಿಡ್-19ಗೆ ಮುಂದೆಯೂ ಲಸಿಕೆ ಬಾರದೇ ಇರಬಹುದು ಎಂದು ಹೇಳಿರುವುದು ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್, ಸದ್ಯಕ್ಕೆ ಸೋಂಕು ತಡೆಗಟ್ಟಬಲ್ಲ ಮ್ಯಾಜಿಕ್‌ ಲಸಿಕೆ ಇಲ್ಲ. ಮುಂದೆಯೂ ಲಸಿಕೆ ಬಾರದೇ ಇರಬಹುದು ಎಂದು ಎಚ್ಚರಿಕೆ ನೀಡಿದರು.

ಸೋಂಕಿತರ ಪರೀಕ್ಷೆ, ಸಂಪರ್ಕಿತರ ಪತ್ತೆ, ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದರ ಮೂಲಕ ವೈರಸ್‌ ಹರಡುವುದನ್ನು ನಿಲ್ಲಿಸಬಹುದು ಅಷ್ಟೇ ಎಂದಿದ್ದಾರೆ.

ನಮ್ಮ ತಂಡ ಈಗಾಗಲೇ ಚೀನಾದಲ್ಲಿ ಅಧ್ಯಯನ ಮಾಡುತ್ತಿದೆ. ಚೀನಾ ಮತ್ತು ವಿಶ್ವದ ಖ್ಯಾತ ವಿಜ್ಞಾನಿಗಳು ಕೋವಿಡ್‌19 ಮೂಲದ ಬಗ್ಗೆ ಅಧ್ಯಯನ ಮಾಡಲಿದ್ದಾರೆ. ಈಗಾಗಲೇ ಮೊದಲು ವುಹಾನ್‌ನಲ್ಲಿ ಕೇಸ್‌ ಪತ್ತೆಯಾದ ಬಗ್ಗೆ ಅಧ್ಯಯನ ಆರಂಭಗೊಂಡಿದೆ. ಈಗ ತಳಮಟ್ಟದ ಅಧ್ಯಯನ ನಡೆಯುತ್ತಿದ್ದು ದೀರ್ಘವಾದ ಅಧ್ಯಯನ ನಡೆಯಬೇಕಿದೆ ಎಂದು ತಿಳಿಸಿದರು.

ಚೀನಾ ವಿಜ್ಞಾನಿಗಳು ಹೇಳುವ ಪ್ರಕಾರ ಪ್ರಾಣಿಯಿಂದ ಈ ವೈರಸ್‌ ಮಾನವನಿಗೆ ಹರಡಿದೆ. ವುಹಾನ್‌ನಲ್ಲಿರುವ ಪ್ರಾಣಿಗಳ ವೆಟ್‌ ಮಾರುಕಟ್ಟೆಯಿಂದ ಇದು ಹರಡಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ವೈರಸ್‌ ಬಗ್ಗೆ ಅಧ್ಯಯನ ಮಾಡುತ್ತಿರುವ ವಿಶ್ವದ ಇತರೇ ವಿಜ್ಞಾನಿಗಳು ಇದು ವುಹಾನ್‌ ವೈರಾಲಜಿ ಲ್ಯಾಬ್‌ನಿಂದ ಸೋರಿಕೆಯಾದ ವೈರಸ್‌. ಈ ಕಾರಣಕ್ಕೆ ಚೀನಾ ಮೂಲವನ್ನು ಸರಿಯಾಗಿ ವಿವರಿಸದೇ ಪ್ರಪಂಚಕ್ಕೆ ತಪ್ಪು ಮಾಹಿತಿ ನೀಡಿದೆ ಎಂದು ಚೀನಾದ ವಾದವನ್ನು ತಿರಸ್ಕರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button