Latest

  ಟ್ರಂಫ್‌ರನ್ನೇ ಬ್ಲಾಕ್ ಮಾಡಿದ ನಿಮಗೆ ಹಿಂದೂ ದೇವರ ಅವಹೇಳನಕಾರರನ್ನು ಬ್ಲಾಕ್ ಮಾಡಲು ಏನು ಅಡ್ಡಿ ? ಟ್ವಿಟರ್ ವಿರುದ್ಧ ಕಿಡಿಕಾರಿದ ಹೈ ಕೋರ್ಟ್

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ –

ಹಿಂದೂ ದೇವರುಗಳ ವಿರುದ್ಧ ವಿಖ್ಯಾತ ಸೋಷಿಯಲ್ ಮೀಡಿಯಾ, ಮೈಕ್ರೋ ಬ್ಲಾಗಿಂಗ್ ವೇದಿಕೆಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ಯಾವ್ಯಾವುದೋ ಅನಾಮಧೇಯ ಹೆಸರುಗಳಲ್ಲಿ ಹಿಂದೂ ದೇವರುಗಳ ಬಗ್ಗೆ ಟೀಕೆ ಎಗ್ಗಿಲ್ಲದೆ ನಡೆಯುತ್ತಿದೆ.

ಇಂಥಹ ಒಂದು ಪೋಸ್ಟ್ ಆಧರಿಸಿ ದೆಹಲಿ ಹೈ ಕೋರ್ಟ್‌ಗೆ ದಾಖಲಾಗಿದ್ದ ದೂರಿನ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಪೀಠ ಬೃಹತ್ ಮೈಕ್ರೋ ಬ್ಲಾಗಿಂಗ್ ಕಂಪನಿಯಾದ ಟ್ವಿಟರ್‌ಗೆ ತರಾಟೆಗೆ ತೆಗೆದುಕೊಂಡಿದೆ.

ಏನಿದು ದೂರು ?

Home add -Advt

ಟ್ವಿಟರ್‌ನಲ್ಲಿ ಇತ್ತೀಚೆಗೆ ಅಥಿಯೆಸ್ಟ್ ರಿಪಬ್ಲಿಕ್ ಎಂಬ ಟ್ವಿಟರ್ ಹ್ಯಾಂಡಲ್ ಮೂಲಕ ಮಾ ಕಾಳಿ ದೇವಿಯ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈ ಕೋರ್ಟ್‌ಗೆ ದೂರು ಸಲ್ಲಿಸಲಾಗಿದೆ.

ಡೋನಾಲ್ಡ್ ಟ್ರಂಫ್‌ರನ್ನೇ ಬ್ಲಾಕ್ ಮಾಡಿದ್ದೀರಿ ಇವರಿಗ್ಯಾಕಿಲ್ಲ ?

ದೂರಿನ ವಿಚಾರಣೆ ನಡೆಸಿದ ನ್ಯಾಯ ಪೀಠ, ನೀವು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಡೋನಾಲ್ಡ್ ಟ್ರಂಪ್‌ರನ್ನೇ ಬ್ಲಾಕ್ ಮಾಡಿದ್ದೀರಿ, ಆದರೆ ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುವವರನ್ನು ಯಾಕೆ ಬ್ಲಾಕ್ ಮಾಡಲ್ಲ ಎಂದು ಖಾರವಾಗಿ ಪ್ರಶ್ನಿಸಿದೆ.

ಜಗತ್ತಿನ ಇತರ ದೇಶಗಳ ಜನರ ಭಾವನೆಗಳನ್ನೂ ಸಹ ಅರ್ಥ ಮಾಡಿಕೊಳ್ಳಬೇಕು, ಆದರೆ ನೀವು ಅದರಲ್ಲಿ ವಿಫಲರಾಗುತ್ತಿದ್ದೀರಿ ಎಂದು ನ್ಯಾಯಪೀಠ ಸೋಷಿಯಲ್ ಮೀಡಿಯಾಗಳಿಗೆ ಎಚ್ಚರಿಸಿದೆ.

ಬೆಂಗಳೂರು – ಪುಣಾ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ; NH4ಕ್ಕೆ ಪರ್ಯಾಯ; ಕೇಂದ್ರದ ಬೃಹತ್ ಯೋಜನೆ

Related Articles

Back to top button