Kannada NewsKarnataka NewsNational

*ಮದುವೆಯಾದ ಮೂರೆ ವಾರದಲ್ಲಿ ಪತಿಯನ್ನು ಕೊಂದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ಮದುವೆಯಾದ ಕೇವಲ ಮೂರು ವಾರಗಳಲ್ಲಿ ತನ್ನ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. 

ಕಳೆದೆರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.  ಮೃತ ಅನಿಲ್‌ ಲೋಖಂಡೆ ಮೇ 23ರಂದು ಆರೋಪಿ ರಾಧಿಕಾ ಜೊತೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಿವಾಹವಾಗಿದ್ದರು. 

Related Articles

ಮದುವೆಯಾಗಿ ಮೂರು ವಾರ ಕಳೆಯುತ್ತಿದ್ದಂತೆ ಇಬ್ಬರ ಮಧ್ಯೆ ಮನಸ್ತಾಪ ಆರಂಭವಾಗಿದ್ದು, ಜೂನ್ 10ರ ರಾತ್ರಿ ಕೂಡ ಇಬ್ಬರು ಜಗಳವಾಡಿದ್ದಾರೆ. ಜಗಳದ ಬಳಿಕ ಪತಿ ಅನಿಲ್ ಲೋಖಂಡೆ ನಿದ್ರೆಗೆ ಜಾರಿದ್ದಾರೆ. ಈ ವೇಳೆ ಕೋಪದಲ್ಲಿದ್ದ ಪತ್ನಿ ಕೊಡಲಿಯಿಂದ ಪತಿಯ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾಳೆ.

ಗಂಡ ಸತ್ತ ನಂತರ ತನ್ನ ಸಹೋದರನಿಗೆ ಕರೆ ಮಾಡಿ ಕೊಲೆಯ ವಿಚಾರ ತಿಳಿಸಿದ್ದಾಳೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಆಕೆಯ ವಿರುದ್ಧ ಬಿಎನ್‌ಎಸ್‌ (ಕೊಲೆ) ಸೆಕ್ಷನ್ 103 (1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

Home add -Advt

ಪ್ರಕರಣದ ತನಿಖೆ ಮುಂದುವರಿದಿದ್ದು, ರಾಧಿಕಾ ಪತಿ ಅನಿಲ್‌ನನ್ನು ಕೊಲೆ ಮಾಡಲು ಅಸಲಿ ಕಾರಣ ಏನು ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಿದೆ.

Related Articles

Back to top button