Latest

ಪತ್ನಿ ಹಾಗೂ ಅತ್ತೆಯನ್ನೇ ಕೊಚ್ಚಿ ಕೊಲೆಗೈದ ಪಾಪಿ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಕೌಟುಂಬಿಕ ಕಲಹಕ್ಕೆ ಪತಿ ಮಹಾಶಯನೊಬ್ಬ ಪತ್ನಿ ಹಾಗೂ ಅತ್ತೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಬಳಿ ನಡೆದಿದೆ.

ಇಲ್ಲಿನ ನಿಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಠಲ್ ಮನಗೂಳಿ ಪತ್ನಿ ಹಾಗೂ ಅತ್ತೆಯನ್ನ ಕೊಲೆಗೈದ ವ್ಯಕ್ತಿ. ರಂಜಿತಾ (22) ಅತ್ತೆ ರೇಣವ್ವ (50) ಕೊಲೆಯಾದ ಮಹಿಳೆಯರು.

ಒಂದು ವರ್ಷದ ಹಿಂದಷ್ಟೇ ವಿಠ್ಠಲ್ ಮತ್ತು ರಂಜಿತಾ ಮದುವೆಯಾಗಿದ್ದರು. ವಾರದ ಹಿಂದೆ ಗಂಡ-ಹೆಂಡತಿ ಜಗಳವಾಗಿ ರಂಜಿತಾ ತವರು ಮನೆ ಸೇರಿದ್ದರು. ಎರಡು ದಿನದ ಹಿಂದೆ ರಂಜಿತಾ ತಾಯಿ ರೇಣವ್ವ ಜೊತೆ ಪತಿಯ ಮನೆಗೆ ಆಗಮಿಸಿದ್ದರು. ಈ ವೇಳೆ ಮೂವರ ನಡುವೆ ಜಗಳ ನಡೆದಿದೆ. ಕೋಪದ ಬರಕ್ಕೆ ವಿಠ್ಠಲ್ ಮನೆಯಲ್ಲಿದ್ದ ಕೊಡಲಿಯಿಂದ ಅತ್ತೆ ಹಾಗೂ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ವರದಕ್ಷಿಣೆ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎನ್ನಲಾಗಿದ್ದು, ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button