LatestUncategorized

*ಹೆಂಡತಿಯನ್ನೇ ಬರ್ಬರವಾಗಿ ಕೊಲೆಗೈದ ಗಂಡ*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಪತ್ನಿಯ ಶೀಲ ಶಂಕಿಸಿ ಪತಿ ಮಹಾಶಯ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪುರದಲ್ಲಿ ನಡೆದಿದೆ.

ಪವಿತ್ರಾ ಅಲಿಯಾಸ್ ಮಮತಾ (22) ಮೃತ ಮಹಿಳೆ. ಆರೋಪಿ ನಾಗರಾಜ್ ಪತ್ನಿಯನ್ನೇ ಕೊಂದ ಪತಿ.

ಕಳೆದ ವರ್ಷವಷ್ಟೇ ವಿವಾಹವಾಗಿದ್ದ ಮಮತಾ ಹಾಗೂ ನಾಗರಾಜ್ ಮಾನ್ವಿ ಬಳಿಯ ಇಟ್ಟಿಗೆ ತಯಾರಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್ ಗೆ ಪತ್ನಿ ಮಮತಾ ಮೇಲೆ ಅನುಮಾನ. ಅನುಮಾನ ವಿಪರೀತಕ್ಕೆ ಹೋಗಿ ಈಗ ಹೆಂಡತಿಯನ್ನೇ ಕೊಲೆಗೈದಿದ್ದಾನೆ.

ಮಾನ್ವಿ ಪೊಲೀಸರು ಆರೋಪಿ ನಾಗರಾಜ್ ನನ್ನು ವಶಕ್ಕೆ ಪಡೆದಿದ್ದಾರೆ.

Home add -Advt

*ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಗಳಿಗೆ ಸಿದ್ದರಾಮಯ್ಯ ಸ್ಪಷ್ಟನೆ*

https://pragati.taskdun.com/siddaramaiahpressmeetlokayuktaacb/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button