ಪ್ರಗತಿವಾಹಿನಿ ಸುದ್ದಿ: ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯ ವಲಯದ ಕಣಕುಂಬಿ ಬಳಿಯ ತೆರೆದ ಬಾವಿಯಲ್ಲಿ ಗುರುವಾರ ಮಧ್ಯಾಹ್ನ ನೀರು ಕುಡಿಯಲು ಇಳಿದಿದ್ದ ಕಾಡುಕೋಣವೊಂದು ಬಾವಿಯಿಂದ ಹೊರಗೆ ಬರಲಾಗದೇ ಸಿಲುಕಿಕೊಂಡಿತ್ತು.
ಸ್ಥಳೀಯರು ಈ ಮಾಹಿತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಟ್ಟಿಸಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ಪರಿಶೀಲನೆ ಕೈಗೊಂಡಿದ್ದರು. ಶುಕ್ರವಾರ ಮುಂಜಾನೆ ಜೆಸಿಬಿ ಯಂತ್ರದೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಕಾಡುಕೋಣ ಹೊರಬರಲು ದಾರಿ ನಿರ್ಮಿಸಲಾಯಿತು.
ಕಂದಕದಲ್ಲಿ ಸಿಲುಕಿ ಗಾಬರಿಗೊಂಡಿದ್ದ ಕಾಡುಕೋಣ ಹೊರಬರಲು ದಾರಿ ದೊರೆಯುತ್ತಲೇ ಬಾವಿಯಿಂದ ಹೊರಬಂದು ಅರಣ್ಯದೊಳಗೆ ಮರೆಯಾಯಿತು. ಖಾನಾಪುರ ಮತ್ತು ಕಣಕುಂಬಿ ವಲಯದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ